ಸಾವರ್ಕರ್ ಎಂದರೆ ಕಿಚ್ಚು,
ಸಾವರ್ಕರ್ ಎಂದರೆ ಶಕ್ತಿ,
ಸಾವರ್ಕರ್ ಎಂದರೆ ಆತ್ಮಾಭಿಮಾನ,
ಸಾವರ್ಕರ್ ಎಂದರೆ ದೇಶಭಕ್ತಿ,
ಸಾವರ್ಕರ್ ಎಂದರೆ ಸಮರ್ಪಣೆ.
"ಸ್ವಾತಂತ್ರವೀರ ವಿನಾಯಕ ದಾಮೋದರ ಸಾವರ್ಕರ್".
ಆ ವೀರ ಕಲಿಯ ಹೆಸರು ಕೇಳಿದರೆ ಮೈ ರೋಮಾಂಚನಗೊಳ್ಳುತ್ತದೆ.1883 ಮೇ 28 ರಂದು ಮಹಾರಾಷ್ಟ್ರದ ನಾಸಿಕ್ ನ ಭಗೂರ್ ಗ್ರಾಮದ ದಾಮೋದರ ಸಾವರ್ಕರ್ ಮತ್ತು ಯಶೋದಾ ಸಾವರ್ಕರ್ ದಂಪತಿಗೆ ಜನಿಸಿದ ವಿನಾಯಕರು ಮುಂದೆ ವೀರ ಸಾವರ್ಕರ್ ಆಗಿ ಬೆಳೆದು ನಿಂತರು. ಚಾಪೇಕರ್ ಸಹೋದರರ ಸಾಹಸವೇ ಸಾವರ್ಕರ್ ರಿಗೆ ದಾರಿದೀಪ. ಭಾಷಣ, ಸಂಘಟನೆ, ಚಳುವಳಿ, ಬರವಣಿಗೆಯ ಮೂಲಕ ದೇಶಭಕ್ತರಿಗೆ ಅರಿವು ಮತ್ತು ಕ್ರಾಂತಿ ಮೂಡಿಸುತ್ತಿದ್ದರು.
ಸ್ನೇಹಿತರನ್ನು ಒಟ್ಟುಗೂಡಿಸಿ 'ಅಭಿನವ ಭಾರತ' ವನ್ನು ಸ್ಥಾಪಿಸಿ ದೇಶಸೇವೆ ಮಾಡುತ್ತಿದ್ದರು.ಬಾಲಗಂಗಾಧರ ತಿಲಕರ ಸಮ್ಮುಖದಲ್ಲಿ ವಿದೇಶಿ ಬಟ್ಟೆ ಮತ್ತು ವಿದೇಶಿ ನಿರ್ಮಿತ ವಸ್ತುಗಳನ್ನು ಕಲೆಹಾಕಿ ಅವುಗಳನ್ನೆಲ್ಲ ಸುಟ್ಟು ಭಸ್ಮಮಾಡಿ ದೇಶಪ್ರೇಮವನ್ನು ಮೆರೆದರು.ಅಭಿನವ ಭಾರತದ ಸ್ನೇಹಿತರು ತಮ್ಮ ದೇಶ ಸೇವೆ ಮುಂದುವರೆಸಿದ್ದರು. ಆದರೆ ಸಾವರ್ಕರ್
ತದನಂತರದಲ್ಲಿ ಸ್ಕಾಲರ್ ಶಿಪ್ ಪಡೆದು ತಿಲಕರ ನೆರವಿನೊಂದಿಗೆ ಉನ್ನತ ಶಿಕ್ಷಣಕ್ಕಾಗಿ ಲಂಡನ್ ನ ಗ್ರೇಸ್ ಇನ್ ಲಾ ಕಾಲೇಜು ಸೇರಿದರು. ಶಾಮ್ ಜೀ ಕೃಷ್ಣ ಶರ್ಮಾ ಅವರು ನಡೆಸುತ್ತಿದ್ದ ಭಾರತ್ ಭವನ್ ನಲ್ಲಿ ಉಳಿದುಕೊಂಡಿದ್ದರು.
ಸಾವರ್ಕರ್ ಬಗ್ಗೆ ಕೇಳಿದಾಗಲೆಲ್ಲ ಮದನ್ ಲಾಲ್ ದಿಂಗ್ರನ ಸಾಹಸಗಾದೆ ನೆನಪಾಗುತ್ತದೆ.
ಪಂಜಾಬ್ ಮೂಲದ ಶ್ರೀಮಂತ ಕುಟುಂಬದಿಂದ ಬಂದಿದ್ದ ಮದನ್ ಲಾಲ್ ದಿಂಗ್ರನ ಪರಿಚಯವಾಯಿತು. ಸಾವರ್ಕರ್ ರ ರಾಷ್ಟ್ರಪ್ರೇಮ,ನಾಯಕತ್ವ ಗುಣ,ಭಾಷಣ, ಬರವಣಿಗೆಯಿಂದ ಪ್ರೇರಣೆಗೊಂಡು ಸ್ವಾತಂತ್ಯ ಹೋರಾಟದಲ್ಲಿ ಭಾಗವಹಿಸಲು ನಿರ್ಧರಿಸಿದ.ಸಾವರ್ಕರ್ ರ ಒಂದೇ ಮಾತಿಗೆ ದಿಂಗ್ರ ಬ್ರಿಟಿಷ್ ಅಧಿಕಾರಿ ಕರ್ಝನ್ ವೇಯ್ಲಿಯ ಎದೆಸೀಳಿ ,ತಾನು ವಿದೇಶದಲ್ಲಿ ಗಲ್ಲಿಗೇರಿದ ಮೊದಲ ಭಾರತೀಯ ಕ್ರಾಂತಿಕಾರೀಯಾಗಿ ವಂದೇಮಾತರಂ ಎಂದು ಹೇಳಿ ಹುತಾತ್ಮನಾದ.
ನಂತರದಲ್ಲಿ ಅನೇಕರು ಸಾವರ್ಕರ್ ಸಂಪರ್ಕಕ್ಕೆ ಬಂದು ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಡಲು ಸನ್ನದ್ಧರಾದರು. ಸಾವರ್ಕರ್ ರ ಸಲಹೆಯ ಮೇರೆಗೆ ನೇತಾಜಿ ಸುಭಾಷ್ ಚಂದ್ರಬೋಸ್ ಸೈನ್ಯ ಕಟ್ಟಿ ಜಪಾನ್, ಜರ್ಮನಿ ಹಾಗೂ ಇತರ ದೇಶಗಳ ಸಹಾಯ ಪಡೆದು ಬ್ರಿಟಿಷರ ಮೇಲೆ ದಾಳಿ ಮಾಡಿದರು.ಅಸ್ಪೃಶ್ಯತೆಯನ್ನು ಹೋಗಲಾಡಿಸಿ ಕೆಳವರ್ಗದವರಿಗೂ ದೇವಸ್ತಾನಕ್ಕೆ ಪ್ರವೇಶ ಕಲ್ಪಿಸಿದರು. ಸಾವರ್ಕರ್ ಅಂದ್ರೇನೆ ಹಾಗೆ ಅದೊಂದು ಕಿಚ್ಚು, ಶಕ್ತಿ,ದೇಶಪ್ರೇಮ.
ಸಾವರ್ಕರ್ ಒಬ್ಬ ಚಿಂತಕ ಕೂಡ ಆಗಿದ್ದರು. ಬ್ರಿಟಿಷರ 1857 ರಲ್ಲಿ ನಡೆದ ಕ್ರಾಂತಿಯನ್ನು ಸಿಪಾಯಿ ದಂಗೆ ಎಂದು ಕರೆದರೆ ಸಾವರ್ಕರ್ ಅದನ್ನು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಹೇಳಿದರು. ಅದನ್ನಾದರಿಸಿ
'The Indian War of Independence' ಎಂಬ ಪುಸ್ತಕವನ್ನೇ ಬರೆದರು.ಬ್ರಿಟಿಷ ಸರ್ಕಾರ ಭಯಗೊಂಡು ಪುಸ್ತಕದ ಮಾರಾಟವನ್ನು ನಿಷೇಧಿಸಿತು. ಬ್ರಿಟಿಷರಲ್ಲಿ ಅಷ್ಟು ಭೀತಿಯನ್ನು ಈ ಪುಸ್ತಕ ಮೂಡಿಸಿತ್ತು.
ಮುಂದೆ ಇದೇ ಪುಸ್ತಕ ಭಗತ್ ಸಿಂಗ್, ಆಝಾದ್, ರಾಜಗುರು,ಸುಖದೇವ್ ಮುಂತಾದ ಕ್ರಾಂತಿಕಾರಿಗಳಿಗೆ ಸ್ವಾತಂತ್ರ್ಯ ಕೈಪಿಡಿಯಾಗಿ ಮಾರ್ಪಟ್ಟಿತು.
1910 ರಲ್ಲಿ ಬ್ರಿಟಿಷ್ ಸರ್ಕಾರ ಅವರನ್ನು ಬಂಧಿಸಿತು. ಅಂಡಮಾನ್ ಜೈಲಿನಲ್ಲಿ ಕಾಲಪಾನಿ ಶಿಕ್ಷೆ ವಿಧಿಸಿತು. ಬರೋಬ್ಬರಿ 50 ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯುವ ಹಾಗೆ ಮಾಡಿತು. ಆದರೆ ಸಾವರ್ಕರ್ ರ ರಾಷ್ಟ್ರಪ್ರೇಮ ಇನ್ನು ಇಮ್ಮಡಿಯಾಯಿತು. ಜೈಲಿನ ಗೋಡೆಗಳ ಮೇಲೆ ಕಲ್ಲಿನಲ್ಲಿ ಕ್ರಾಂತಿಗೀತೆ,ದೇಶಭಕ್ತಿ ಗೀತೆಗಳನ್ನು ರಚಿಸಿದರು. ಮತಾಂತರವನ್ನು ತಡೆದರು.ಕೆಲವರನ್ನು ಮಾತೃ ಧರ್ಮಕ್ಕೆ ಕರೆತಂದರು. ಜೈಲಿನಲ್ಲಿಯೇ 'Hindutva;Who is hindu ?' ಪುಸ್ತಕವನ್ನೇ ಬರೆದರು. ಹಿಂದೂ, ಜೈನ, ಬೌದ್ಧ, ಸಿಖ್ ಎಲ್ಲವು ಒಂದೇ ಎಂದು ಹೇಳಿ
ಅಖಂಡ ಭಾರತ ದ ಪರಿಕಲ್ಪನೆಯನ್ನಿಟ್ಟರು.
1921 ರಲ್ಲಿ ಜೈಲಿನಿಂದ ಬಿಡುಗಡೆಗೊಂಡು
'ಹಿಂದೂ ಮಹಾಸಭಾ' ದ ನೇತೃತ್ವ ವಹಿಸಿಕೊಂಡು ಏಳು ವರ್ಷಗಳ ಕಾಲ ಅದರ ಅಧ್ಯಕ್ಷರಾಗಿ ಧರ್ಮ ಕಟ್ಟುವುದರಲ್ಲಿ ನಿರತರಾದರು. ಗಣೇಶ ಚತುರ್ಥಿ, ಹೋಳಿ ಹಬ್ಬ ಆಚರಿಸುವುದರ ಮೂಲಕ ಸ್ವಧರ್ಮಿರನ್ನು ಒಗ್ಗೂಡಿಸುವ ಕೆಲಸ ಮಾಡಿದರು.
ಭಾರತ ಸ್ವಾತಂತ್ರ ಪಡೆಯುವುದರಲ್ಲಿ ಕ್ರಾಂತಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದು. ಮುಸ್ಲಿಮರು ದೇಶದ ವಿಭಜನೆಯ ಮಾತೆತ್ತಿದಾಗ ಸಾವರ್ಕರ್ ರು ವಿರೋಧಿಸಿದರು.
"ನೀವು ಬಂದರೆ ನಿಮ್ಮ ಜೊತೆ
ಬರದಿದ್ದರೆ ನಿಮ್ಮನ್ನು ಬಿಟ್ಟು
ಅಡ್ಡ ಬಂದರೆ ನಿಮ್ಮನ್ನೇ ಮೆಟ್ಟಿ
ಸ್ವಾತಂತ್ರಗಳಿಸುತ್ತವೆ" ಎಂದು ಹೇಳಿ ಎಚ್ಚರಿಸಿದರು.
ಸಾವರ್ಕರ್ ತಾವು ನಂಬಿದ್ದ ಸಿದ್ದಾಂತಕ್ಕೆ ಕಟಿಬದ್ಧರಾಗಿದ್ದರು.ಎಂದಿಗೂ ಬ್ರಿಟಿಷರೊಂದಿಗೆ ಕಾಂಪ್ರಮೈಸ್ ಆಗಿರಲಿಲ್ಲ.ತಮಗನ್ನಿಸಿದ ರೀತಿಯಲ್ಲೇ ಹೋರಾಟ ಮುಂದುವರೆಸಿದರು.ಸ್ವಾತಂತ್ರ ಪಡೆಯುವಲ್ಲಿ ಯಶಸ್ವಿಯಾದರು. ನಂತರ ಭಾರತ ಸ್ವಾತಂತ್ರ ಪಡೆದ ಸಂತೋಷಕ್ಕಿಂತ ದೇಶ ವಿಭಜನೆಯಾದ ದುಃಖದಲ್ಲಿ ಮುಳುಗಿದರು.ಆರೋಗ್ಯವು ಕ್ಷೀಣಿಸುತ್ತಾ ಹೋಗಿತು. ಆಹಾರ ಸೇವನೆಯನ್ನು ನಿಲ್ಲಿಸಿ ಬಿಟ್ಟರು.
1966 ಫೆಬ್ರವರಿ 26 ರಂದು ದೇಹ ತ್ಯಜಿಸಿದರು.
ಭಾರತ ಇರುವವರೆಗೂ ಸಾವರ್ಕರ್ ಅವರ ತ್ಯಾಗ, ಬಲಿದಾನಗಳು ಅಮರವಾಗಿ ಉಳಿಯಲಿವೆ.
ಸಾವರ್ಕರ್ ಅವರನ್ನು ಟೀಕಿಸುವ ಬದಲು ಅವರಲ್ಲಿದ್ದ ರಾಷ್ಟ್ರಪ್ರೇಮವನ್ನು ಅಳವಡಿಸಿಕೊಂಡು ಭಾರತವನ್ನು 'ವಿಶ್ವಗುರು'ವನ್ನಾಗಿ ಮಾಡೋಣ.
ಜೈ ಹಿಂದ್ 🇮🇳
ಇಂತಿ ನಿಮ್ಮವ ✍️
🔹ಅಭಿಷೇಕ.ಜೆ.ಎಂ 🔹
Twitter :- @abhish_jm
Instagram :- @abhish_jm