"ನರೇಂದ್ರ ದಾಮೋದರದಾಸ್ ಮೋದಿ" ಹೆಸರಲ್ಲೇ ಒಂದು ಶಕ್ತಿ ಇದೆ. ಈ ಹೆಸರು ಕೇಳಿದರೆ ಮೈ ರೋಮಾಂಚನವಾಗುತ್ತದೆ. ಜಗತ್ತು ಕಂಡ ಅತ್ಯಂತ ಶ್ರೇಷ್ಠ, ಯಶಸ್ವಿ ಪ್ರಧಾನಮಂತ್ರಿ ಆಗಿ ನಮೋ ಹೊರಹೊಮ್ಮಿದ್ದಾರೆ. ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಅತ್ಯಂತ ದೀರ್ಘಕಾಲದವರೆಗೆ ಆಳಿದ ಹೆಗ್ಗಳಿಕೆ ಇವರದ್ದು.
ಸದಾ ಅಭಿವೃದ್ಧಿಯ ಕಡೆ ಚಿಂತಿಸುವ ವ್ಯಕ್ತಿತ್ವ. ೬೦ ವರ್ಷಗಳ ಕಾಂಗ್ರೆಸ್ ಆಡಳಿತದ ನಂತರ ಮೋದಿಜೀ ನಾಯಕತ್ವದಲ್ಲಿ ಬಿಜೆಪಿ ದೇಶದ ಚುಕ್ಕಾಣಿ ಹಿಡಿಯಿತು. "ಸಬ್ ಕಾ ಸಾಥ್ ಸಬ್ ಕಾ ವಿಕಾಸ್" ಎಂಬ ಧ್ಯೇಯ ವಾಕ್ಯದೊಂದಿಗೆ ಅಭಿವೃದ್ಧಿ ಮಂತ್ರ ಜಪಿಸುತ್ತಾ ಆಡಳಿತ ನಡೆಸಿ ಹಲವು ದಿಟ್ಟ ನಿರ್ಧಾರದೊಂದಿದೆ ದೇಶದ ಜನ- ಮನ ಗೆದ್ದಿದ್ದಾರೆ.
ಹಿಂದಿನ ಯುಪಿಎ ಸರ್ಕಾರ ಮಾಡಿದ ಸಾಲವನ್ನತಿರಿಸಿ, ಅಕ್ಕ-ಪಕ್ಕ ದೇಶಗಳ ಜೊತೆ ಉತ್ತಮ ಸಂಬಂಧ ಬೆಸೆದು ಭಾರತವನ್ನು "ವಿಶ್ವಗುರು"ವಾಗಿಸುವತ್ತ ಶ್ರಮಿಸುತ್ತಿದ್ದಾರೆ. ಎರಡನೇ ಅವಧಿಗೆ ತಮ್ಮ ಸರ್ಕಾರವನ್ನು ಮುನ್ನಡೆಸುತ್ತಾ ಹಲವಾರು ಪ್ರಮುಖ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಪೂರ್ಣಗೊಳಿಸುತ್ತಿದ್ದಾರೆ. ನೆನೆಗುದಿಗೆ ಬಿದ್ದಿದ್ದ ಹಲವಾರು ಕಾರ್ಯಗಳು ಪೂರ್ಣಗೊಳ್ಳುತ್ತಿವೆ.ಅಮೆರಿಕ,ಇಸ್ರೇಲ್, ರಷ್ಯಾ, ಭೂತಾನ್,ನೇಪಾಳ್, ಹೀಗೆ ಹತ್ತು ಹಲವು ದೇಶದ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಮೋದಿ ಅವರ ಆಡಳಿತ ವೈಖರಿಯನ್ನು ಶ್ಲಾಘಿಸುತ್ತಿದ್ದಾರೆ.
ಇದೆಲ್ಲದರ ನಡುವೆ COVID-19 ಎಂಬ ಮಹಾಮಾರಿ ಇಡೀ ಜಗತ್ತನ್ನೇ ಆಕ್ರಮಿಸಿಕೊಂಡಿದೆ. ಜಗತ್ತಿನಲ್ಲೇ ಅತ್ಯಂತ ಸುಸಜ್ಜಿತ ವೈದ್ಯಕೀಯ ವ್ಯವಸ್ಥೆ ಹೊಂದಿರುವ ಅಮೆರಿಕ, ಇಟಲಿಹಂತಹ ರಾಷ್ಟ್ರಗಳು ಕೊರೋನ ರೋಗಕ್ಕೆ ತುತ್ತಾಗಿ ನಿವಾರಿಸಲಾಗದೆ ಕೈ ಕಟ್ಟಿ ಕುಳಿತಿವೆ. ಇಂತ ಹೊತ್ತಲ್ಲೇ ಭಾರತದ ಪ್ರಧಾನಿ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡು ದೇಶವನ್ನೇ ಲಾಕ್ ಡೌನ್ ಮಾಡಿ ಕೋರೋನ ತಡೆಗಟ್ಟುವಲ್ಲಿ ಯಶಸ್ವಿ ಆಗುತ್ತಿದ್ದಾರೆ. ನನ್ನ ಪ್ರಕಾರ ಇಡೀ ದೇಶ ಮೊಟ್ಟ ಮೊದಲ ಬಾರಿಗೆ ಜನತಾ ಕರ್ಫ್ಯೂಗೆ ಅಭೂತ ಪೂರ್ವ ಬೆಂಬಲ ಸೂಚಿಸಿದೆ. ಪ್ರಧಾನಿಮಂತ್ರಿಯ ಒಂದು ಕರೆ ಇಡೀ ದೇಶ ಒಳಿತಿಗಾಗಿ ಎಂಬುದು ಎಲ್ಲರಿಗೂ ಮನದಟ್ಟಾಗಿದೆ ಹಾಗೂ ಇದರಿಂದ ವೈದ್ಯರು, ಪೊಲೀಸರು, ನರ್ಸ್ ಗಳು, ಪೌರಕಾರ್ಮಿಕರಿಗೆ ದೇಶವೇ ಎದ್ದು ನಿಂತು ಚಪ್ಪಾಳೆ, ಗಂಟೆ ಬಾರಿಸಿ ಗೌರವ ಸೂಚಿಸಿದೆ.
ಇದಲ್ಲದೆ ಅಮೆರಿಕಾ, ಆಸ್ಟ್ರೇಲಿಯ, ಇಸ್ರೇಲ್ ಸೇರಿ ಹಲವು ರಾಷ್ಟ್ರಗಳು COVID-19 ಟಾಸ್ಕ್ ಫೋರ್ಸ್ ನ ನೇತೃತ್ವ ವಹಿಸುವಂತೆ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತಿದ್ದಾರೆ. ಇದೊಂದೇ ಉದಾಹರಣೆ ಸಾಕು ಮೋದಿಯವರ ನಾಯಕತ್ವ ಗುಣ ಮತ್ತು ಅವರು ಭಾರತವನ್ನು ವಿಶ್ವಗುರುವಾಗಿಸುವತ್ತ ಶ್ರಮಿಸುತ್ತಿರುವುದು ಗೊತ್ತಾಗಿ ಬಿಡುತ್ತದೆ. ಮೋದಿ ಅವರ ಬಗ್ಗೆ ಬರೆಯುತ್ತಾ ಹೋದರೆ ಪುಟಗಳೇ ಸಾಲದು ಹಾಗೆಯೇ ಅವರ ವ್ಯಕ್ತಿತ್ವ ಮತ್ತು ಅವರ ವರ್ಚಸ್ಸು...
ಇಲ್ಲಿಗೆ ನನ್ನ ಬರವಣಿಗೆಯನ್ನು ಮುಗಿಸುತ್ತ,ಮೋದಿಯವರಿಗೆ ಆ ಭಗವಂತ ಆರೋಗ್ಯ, ಆಯಸ್ಸು,ಶಕ್ತಿಯನ್ನು ಕೊಡಲಿ ಎಂದು ಆಶಿಸುತ್ತೇನೆ. ಹಾಗೆಯೇ ನನ್ನ ದೇಶ COVID-19 ಇಂದ ಬೇಗ ಗುಣಮುಖವಾಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಓದಿದ ಎಲ್ಲರಿಗೂ ನನ್ನ ಧನ್ಯವಾದಗಳು..
ಜೈ ಹಿಂದ್ 🇮🇳
ಇಂತಿ ನಿಮ್ಮವ ✍️
ಅಭಿಷೇಕ್. ಜೆ. ಎಂ
Twitter:- @abhish_jm
Instagram:- @abhish_jm
No comments:
Post a Comment