ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವು ತನ್ನದೇಯಾದ ಪ್ರಾಮುಖ್ಯತೆ ಪಡೆದುಕೊಂಡಿದೆ. ಚಿಕ್ಕವರಿಂದ ಹಿಡಿದು ವಯಸ್ಸಾದವರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.
ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಮ್, ಸ್ನಾಪ್ ಚಾಟ್, ಟ್ವಿಟ್ಟರ್, ಟೆಲಿಗ್ರಾಂ,ಯೂಟ್ಯೂಬ್,ಹೀಗೆ ಹತ್ತು ಹಲವು ಸಾಮಾಜಿಕ ಜಾಲತಾಣಗಳು ದಿನೇ ದಿನೇ ತನ್ನ ಬಳಕೆದಾರರನ್ನು ಹೆಚ್ಚಿಸಿಕೊಳ್ಳುತ್ತಲೆ ಇದೆ.
ಜಗತ್ತಿನಲ್ಲಿ ೨ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಭಾರತ.ಆದ್ದರಿಂದ ಇಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆಯು ಹೆಚ್ಚಿದೆ.ಪ್ರತಿ ಮನೆಗೆ ಒಬ್ಬರಂತೆ ಹಿಡಿದರು ದೇಶದಲ್ಲಿರುವ ಮನೆಗಳ ಸಂಖ್ಯೆಯ ಲೆಕ್ಕ ಸಿಕ್ಕರೆ ನಿಮಗೆ ದೇಶದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಅಂದಾಜು ಸಿಗಬಹುದು.
ಸಾಮಾನ್ಯ ನಾಗರಿಕರು ಸಹ ಇದರತ್ತವಾಲಿದ್ದಾರೆ. ದಿನಪತ್ರಿಕೆ ಓದುವುದು, ವಾರ್ತೆ ಕೇಳುವುದು, ಅಲ್ಲದೆ ಹೆಂಗಸರು ಅವರಿಗಿಷ್ಟವಾದ ಧಾರಾವಾಹಿ, ಸಿನೆಮಾ ನೋಡುವುದು ಹೀಗೆ ಹತ್ತು ಹಲವು ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.ಇನ್ನು ರಾಜಕೀಯ ಪಕ್ಷಗಳ ನಾಯಕರು ಸಹ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ಅವರ ರಾಜಕೀಯ ಪ್ರಚಾರ ಇದರ ಮೂಲಕವು ನಡೆಯುತ್ತಿದೆ.ಎಷ್ಟೋ ಸಮಸ್ಯೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಗೆಹರಿದಿವೆ. ಅಲ್ಲದೇ ರಾಜಕೀಯ ನಾಯಕರ ಪರ-ವಿರೋಧದ ಅಲೆ,ಲೈಕ್,ಕಮೆಂಟ್ ಗಳ ಸುರಿಮಳೆ.ಹೀಗೆ ಸಾಮಾಜಿಕ ಜಾಲತಾಣ ತನ್ನ ಪ್ರಭಾವವನ್ನು ಎಲ್ಲೆಡೇ ಬೀರಿದೆ.
ಇನ್ನು ಇಂದಿನ ಯುವಪೀಳಿಗೆ ಬಗ್ಗೆ ಹೇಳಬೇಕೆಂದರೆ ಭಾರತ ದೇಶ ಪ್ರಪಂಚದಲ್ಲಿ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶವಾಗಿದೆ.ಅವರು ಸಹ ಸಾಮಾಜಿಕ ಜಾಲತಾಣಗಳೇ ಜೀವನ ಎನ್ನುವ ಹಾಗೆ ಬದುಕುತ್ತಿದ್ದಾರೆ. ಎಷ್ಟೋ ಯುವಕರು ಇದರ ಮೂಲಕ ಜೀವನ ರೂಪಿಸಿಕೊಂಡಿದ್ದಾರೆ ಅಲ್ಲದೇ ಜೀವನವನ್ನು ಹಾಳು ಮಾಡಿಕೊಂಡಿದ್ದು ಇದೆ. ಸಾಮಾಜಿಕ ಜಾಲತಾಣವನ್ನು ಬಳಸುವ ಬಹುಪಾಲು ಯುವಕರು ಕೋಪ ಮತ್ತು ಭಯದಿಂದ ನರಳುತ್ತಿದ್ದಾರೆ ಎಂದು ಸಂಶೋಧನಾ ವರದಿಯೊಂದು ಹೊರಬಿದ್ದಿದೆ. ಇತ್ತೀಚಿನ ದಿನಗಳಲ್ಲಿ ಬರಿ ಸುಳ್ಳು ಸುದ್ದಿಗಳು, ಸುಳ್ಳು ಆರೋಪಗಳೂ ಸಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.ಆದ್ದರಿಂದ ಯುವಕರು ಸತ್ಯದ ಬಗ್ಗೆ ಒತ್ತುಕೊಟ್ಟು ಒಳ್ಳೆಯ ರೀತಿಯಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸಬೇಕಾಗಿದೆ.
ಸಾಮಾಜಿಕ ಜಾಲತಾಣವಂತು ಮಾಹಿತಿ, ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಬಹು ದೊಡ್ಡ ವೇದಿಕೆಯಾಗಿ ಪರಿವರ್ತನೆಯಾಗಿದೆ. ಎರೆ-ಮರೆಯಲ್ಲಿದ್ದ ಸಾವಿರಾರು ಪ್ರತಿಭೆಗಳು ಇದರಿಂದ ಅನಾವರಣಗೊಂಡಿವೆ. ವ್ಯಾಪಾರ-ವ್ಯವಹಾರ ವೃದ್ಧಿಗೆ, ಮಾರಲು, ಕೊಂಡುಕೊಳ್ಳಲು, ಪ್ರಚಾರ ಮಾಡಲು ಉತ್ತಮ ವೇದಿಕೆಯಾಗಿದೆ. ಎಷ್ಟೋ ಯುವಕರು ಇದರ ಮೂಲಕ ಜೀವನ ರೂಪಿಸಿಕೊಂಡಿದ್ದಾರೆ.
ಇತ್ತೀಚೆಗೆ COVID-19 ಜಗತ್ತಿನಾದ್ಯಂತ ತನ್ನ ಹೆಜ್ಜೆ ಇಟ್ಟಾಗಿನಿಂದ, ದೇಶವೇ ಲಾಕ್ ಡೌನ್ ಆದ ಕಾರಣ ಸಾಮಾಜಿಕ ಜಾಲತಾಣ ಬಳಸುವವರ ಸಂಖ್ಯೆ ವೃದ್ಧಿಸಿದೆ.
ಸಂಗೀತ, ಚಲನಚಿತ್ರ, ವಿಜ್ಞಾನ-ತಂತ್ರಜ್ಞಾನ, ಸಾಹಸ ಹೀಗೆ ಮನೋರಂಜನಾ ಕಾರ್ಯಕ್ರಮಗಳು ಇಲ್ಲಿ ದೊರೆಯುತ್ತಿರುವುದರಿಂದ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
"ಇಂದಿನ ಯುವಕರೇ ಮುಂದಿನ ಪ್ರಜೆಗಳು" ಆದ ಕಾರಣ ಜಾಲತಾಣಗಳಲ್ಲಿ ಅತಿ ಹೆಚ್ಚು ಸಕ್ರಿಯರಾಗಿರುವ ಯುವಕರು ಸರಿಯಾದ ರೀತಿಯಲ್ಲಿ ಇದನ್ನು ಬಳಸಬೇಕಾಗಿದೆ. ಜಾಲತಾಣಗಳ ಮೂಲಕ ದೇಶ ವಿರೋಧಿ ಹೇಳಿಕೆ ಕೊಡುವುದು,ದೇಶಕ್ಕೆ ಮಾರಕವಾಗುವಂತಹ ಕೃತ್ಯ ಎಸಗುವುದನ್ನು ನಿಲ್ಲಿಸಿ ಒಳ್ಳೆಯ ರೀತಿಯಲ್ಲಿ ದೇಶಕ್ಕೆ ಹಾಗೂ ತಮಗೆ ಒಳಿತಾಗುವಂತಹ ಕೆಲಸ ಇದರ ಮೂಲಕ ಮಾಡಬೇಕಾಗಿದೆ.ತಮ್ಮಲಿರುವ ಪ್ರತಿಭೆ ಅನಾವರಣ ಮಾಡಿಕೊಳ್ಳಲು ಒಳ್ಳೆಯ ವೇದಿಕೆಯಾಗಿ ರೂಪಗೊಂಡಿದೆ.
ಆದ್ದರಿಂದ ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ರೀತಿ ಬಳಸಿಕೊಂಡು ದೇಶ ಕಟ್ಟುವ ಕೆಲಸ ಮಾಡಬೇಕಾಗಿದೆ.ಆಗ ಮಾತ್ರ "ದೇಶ ನಮಗೇನು ಕೊಟ್ಟಿದೆ ಅನ್ನುವುದಕ್ಕಿಂತ ನಾವೇನು ದೇಶಕ್ಕೆ ಕೊಟ್ಟಿದ್ದೇವೆ" ಎಂಬ ಮಾತಿಗೆ ಉತ್ತರ ದೊರಕುತ್ತದೆ. ಇದರ ಮೂಲಕ ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ರೀತಿ ಬಳಸಿಕೊಂಡು ದೇಶವನ್ನು ಕಟ್ಟುವ ಕೆಲಸ ಮಾಡೋಣ..
ಜೈ ಹಿಂದ್ 🇮🇳
ಇಂತಿ ನಿಮ್ಮವ ✍️
🔹ಅಭಿಷೇಕ. ಜೆ. ಎಂ🔹
Twitter- @abhish_jm
Instagram- @abhish_jm
ಚೆನ್ನಾಗಿದೆ.ಇದೇ ತರ ನಿಮ್ಮ ಪ್ರಯತ್ನ ಮುಂದುವರೆಯಲಿ.
ReplyDeleteಧನ್ಯವಾದಗಳು
Deleteಸೂಪರ್ ಸ್ಟೋರಿ
ReplyDeleteThank you
Deleteಸೂಪರ್
ReplyDeleteಧನ್ಯವಾದಗಳು
DeleteNice said bro
ReplyDelete