Tuesday, April 14, 2020

'D-Mart' ಬಗ್ಗೆ ನಿಮಗೆಷ್ಟು ಗೊತ್ತು..?!!




  "D-Mart" ಎಲ್ಲರಿಗೂ ಚಿರಪರಿಚಿತ.ಇದು ಭಾರತದ ಅತಿದೊಡ್ಡ ಸೂಪರ್ ಮಾರ್ಕೆಟ್ ಚೈನ್.ಅತ್ಯಂತ ಕಡಿಮೆ ಬೆಲೆಗೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಬಹುದಾದ ಮಾರ್ಕೆಟ್.ಇಲ್ಲಿ ದಿನನಿತ್ಯ ಬಳಸುವ ವಸ್ತುಗಳಾದ ಆಹಾರ ಸಾಮಗ್ರಿಗಳು,ಬಟ್ಟೆಗಳು,ಅಡುಗೆಮನೆ ಸಾಮಗ್ರಿಗಳು, ತರಕಾರಿ, ಹಣ್ಣು,ಬ್ಯೂಟಿ ಸಾಮಗ್ರಿಗಳು ಇನ್ನು ಅನೇಕ  ಪ್ರತಿನಿತ್ಯಬೇಕಾಗುವ ವಸ್ತುಗಳು ಇಲ್ಲಿ ಕೈಗೆಟಕುವ ದರದಲ್ಲಿ ಸಿಗುತ್ತವೆ.
  ರಾಧಾಕೃಷ್ಣನ್ ದಮಾನಿ ಇದರ ಸಂಸ್ಥಾಪಕರು.ಇವರು ಮೂಲತಃ ರಾಜಸ್ತಾನದ ಬೀಕನೆರ್ ಎಂಬ ಊರಿಗೆ ಸೇರಿದವರು. Avenue Supermarts Ltd.(ASL) ಮೂಲಕ D-Mart ಅನ್ನು 2002 ರಲ್ಲಿ ಪ್ರಾರಂಭಿಸಿದರು.ಮುಂಬೈನ ಪೋವೈನಲ್ಲಿ ಇದರ ಮೊದಲ ಬ್ರಾಂಚ್ ಆರಂಭವಾಯಿತು.ಅಲ್ಲದೇ ಪೋವೈ, ಮುಂಬೈಯಲ್ಲೆ ಇದರ ಪ್ರಧಾನ ಕಚೇರಿ ಇದೆ.
ಕರ್ನಾಟಕ,ಮಹಾರಾಷ್ಟ್ರ,ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮದ್ಯಪ್ರದೇಶ,ರಾಜಸ್ತಾನ್, ಉತ್ತರಪ್ರದೇಶ,ಪಂಜಾಬ್,ಚಂಡಿಗಡ್,ಗುಜರಾತ್ ಹೀಗೆ ದೇಶಾದ್ಯಂತ 11 ರಾಜ್ಯಗಳ 72 ನಗರಗಳಲ್ಲಿ ಒಟ್ಟು 206 ಬ್ರಾಂಚ್ ಗಳನ್ನು ಹೊಂದಿ ತನ್ನ ಕಾರ್ಯನಿರ್ವಹಿಸುತ್ತಾ ಜನರ ದಿನನಿತ್ಯದ ಬದುಕಿಗೆ ಆಸರೆಯಾಗಿದೆ.
  D-Mart, D-Mart Minimax, D-Mart Premia, D-Homes, Dutch Harbor ಹೀಗೆ ಹಲವು ಕಂಪನಿಗಳನ್ನು ಪ್ರಾರಂಭಿಸುವ ಮೂಲಕ Avenue Supermarts Ltd.(ASL)ನ ರಾಧಾಕೃಷ್ಣನ್ ದಮಾನಿ ಅವರು ತಮ್ಮ ವ್ಯಾಪಾರ-ವಹಿವಾಟುಗಳನ್ನ ವೃದ್ಧಿಸಿಕೊಂಡಿದ್ದಾರಲ್ಲದೆ,ವಿಸ್ತರಿಸಿ ಕೊಂಡಿದ್ದಾರೆ.ಅದಲ್ಲದೆ ರಾಧಾಕೃಷ್ಣನ್ ದಮಾನಿಯವರು ಫೋರ್ಬ್ಸ್ ಟಾಪ್ 10 Billionaire ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
  ಇತ್ತೀಚಿನ ದಿನಗಳಲ್ಲಿ COVID-19 ಮಹಾಮಾರಿ ಜಗತ್ತಿನಾದ್ಯಂತ ತನ್ನ ಪ್ರಭಾವ ಬೀರುತ್ತಾ ಅನೇಕ ಜನರ ಜೀವನವನ್ನ ಕೊನೆಯಾಗಿಸಿದೆ. ಭಾರತದಲ್ಲೂ ದಿನೇ ದಿನೇ ಹೆಚ್ಚುತ್ತಿದೆ. ಹೀಗಿರುವಾಗ ಭಾರತ ಸರ್ಕಾರ ದೇಶವನ್ನು ಲಾಕ್ ಡೌನ್ ಮಾಡುವ ಮೂಲಕ ಎಲ್ಲ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದೆ.ಆದರೆ D-Mart ಎಂದಿನಂತೆ ತನ್ನ ಕಾರ್ಯ ನಿರ್ವಹಿಸುತ್ತಿದೆ.ಜನರಿಗೆ ಬೇಕಾಗುವ ದಿನನಿತ್ಯದ ಸಾಮಗ್ರಿಗಳನ್ನು ಆನ್ಲೈನ್ ಮೂಲಕ ಗ್ರಾಹಕರ ಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತಿದೆ.ಹೀಗೆ ತನ್ನ ಗಲ್ಲಾಪೆಟ್ಟಿಗೆಯನ್ನು ಭರ್ತಿ ಮಾಡಿಕೊಳ್ಳುತ್ತಿದೆ.
 ಅದಲ್ಲದೇ PM Care's Fund ಗೆ 100 ಕೋಟಿ ಹಾಗೂ ಮಹಾರಾಷ್ಟ್ರ,ಗುಜರಾತ್ ಸರ್ಕಾರಕ್ಕೆ ತಲಾ 10 ಕೋಟಿ, ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ಪಂಜಾಬ್, ರಾಜಸ್ತಾನ ರಾಜ್ಯ ಸರ್ಕಾರಗಳಿಗೆ ತಲಾ 5 ಕೋಟಿ ರೂ, ತಮಿಳುನಾಡು, ಛತ್ತೀಸ್ ಗಢ,ಮದ್ಯಪ್ರದೇಶ, ಉತ್ತರಪ್ರದೇಶ ರಾಜ್ಯ ಸರ್ಕಾರಗಳಿಗೆ ತಲಾ 2.5 ಕೋಟಿ ರೂಪಾಯಿ ಧನ-ಸಹಾಯವನ್ನು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. COVID-19 ವಿರುದ್ಧ ಹೋರಾಡಲು ದೇಶಕ್ಕೆ,ಪ್ರಧಾನಿಗಳಿಗೆ ಹಾಗೂ ಸರ್ಕಾರಕ್ಕೆ ಶಕ್ತಿ ತುಂಬಿದ್ದಾರೆ.
ಅವರಿಗೆ ಮತ್ತು ಅವರು ಸಾಕಿ ಬೆಳೆಸುತ್ತಿರುವ ಕಂಪೆನಿಗೆ ಒಳಿತಾಗಲಿ.
ಜೈ ಹಿಂದ್ 🇮🇳

ಇಂತಿ ನಿಮ್ಮವ ✍️
🔹ಅಭಿಷೇಕ್. ಜೆ. ಎಂ 🔹

Twitter:- @abhish_jm

Instagram:- @abhish_jm


  






Tuesday, April 7, 2020

"ಸಾಮಾಜಿಕ ಜಾಲತಾಣ"


  ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವು ತನ್ನದೇಯಾದ ಪ್ರಾಮುಖ್ಯತೆ ಪಡೆದುಕೊಂಡಿದೆ. ಚಿಕ್ಕವರಿಂದ ಹಿಡಿದು ವಯಸ್ಸಾದವರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. 
ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಮ್, ಸ್ನಾಪ್ ಚಾಟ್, ಟ್ವಿಟ್ಟರ್, ಟೆಲಿಗ್ರಾಂ,ಯೂಟ್ಯೂಬ್,ಹೀಗೆ ಹತ್ತು ಹಲವು ಸಾಮಾಜಿಕ ಜಾಲತಾಣಗಳು ದಿನೇ ದಿನೇ ತನ್ನ ಬಳಕೆದಾರರನ್ನು ಹೆಚ್ಚಿಸಿಕೊಳ್ಳುತ್ತಲೆ ಇದೆ.
  ಜಗತ್ತಿನಲ್ಲಿ ೨ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಭಾರತ.ಆದ್ದರಿಂದ ಇಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆಯು ಹೆಚ್ಚಿದೆ.ಪ್ರತಿ ಮನೆಗೆ ಒಬ್ಬರಂತೆ ಹಿಡಿದರು ದೇಶದಲ್ಲಿರುವ ಮನೆಗಳ ಸಂಖ್ಯೆಯ ಲೆಕ್ಕ ಸಿಕ್ಕರೆ ನಿಮಗೆ ದೇಶದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಅಂದಾಜು ಸಿಗಬಹುದು. 
  ಸಾಮಾನ್ಯ ನಾಗರಿಕರು ಸಹ ಇದರತ್ತವಾಲಿದ್ದಾರೆ. ದಿನಪತ್ರಿಕೆ ಓದುವುದು, ವಾರ್ತೆ ಕೇಳುವುದು, ಅಲ್ಲದೆ ಹೆಂಗಸರು ಅವರಿಗಿಷ್ಟವಾದ ಧಾರಾವಾಹಿ, ಸಿನೆಮಾ ನೋಡುವುದು ಹೀಗೆ ಹತ್ತು ಹಲವು ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.ಇನ್ನು ರಾಜಕೀಯ ಪಕ್ಷಗಳ ನಾಯಕರು ಸಹ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ಅವರ ರಾಜಕೀಯ ಪ್ರಚಾರ ಇದರ ಮೂಲಕವು ನಡೆಯುತ್ತಿದೆ.ಎಷ್ಟೋ ಸಮಸ್ಯೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಗೆಹರಿದಿವೆ. ಅಲ್ಲದೇ ರಾಜಕೀಯ ನಾಯಕರ ಪರ-ವಿರೋಧದ ಅಲೆ,ಲೈಕ್,ಕಮೆಂಟ್ ಗಳ ಸುರಿಮಳೆ.ಹೀಗೆ ಸಾಮಾಜಿಕ ಜಾಲತಾಣ ತನ್ನ ಪ್ರಭಾವವನ್ನು ಎಲ್ಲೆಡೇ ಬೀರಿದೆ.
  ಇನ್ನು ಇಂದಿನ ಯುವಪೀಳಿಗೆ ಬಗ್ಗೆ ಹೇಳಬೇಕೆಂದರೆ  ಭಾರತ ದೇಶ ಪ್ರಪಂಚದಲ್ಲಿ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶವಾಗಿದೆ.ಅವರು ಸಹ ಸಾಮಾಜಿಕ ಜಾಲತಾಣಗಳೇ ಜೀವನ ಎನ್ನುವ ಹಾಗೆ ಬದುಕುತ್ತಿದ್ದಾರೆ. ಎಷ್ಟೋ ಯುವಕರು ಇದರ ಮೂಲಕ ಜೀವನ ರೂಪಿಸಿಕೊಂಡಿದ್ದಾರೆ ಅಲ್ಲದೇ ಜೀವನವನ್ನು ಹಾಳು ಮಾಡಿಕೊಂಡಿದ್ದು ಇದೆ. ಸಾಮಾಜಿಕ ಜಾಲತಾಣವನ್ನು ಬಳಸುವ ಬಹುಪಾಲು ಯುವಕರು ಕೋಪ ಮತ್ತು ಭಯದಿಂದ ನರಳುತ್ತಿದ್ದಾರೆ ಎಂದು ಸಂಶೋಧನಾ ವರದಿಯೊಂದು ಹೊರಬಿದ್ದಿದೆ. ಇತ್ತೀಚಿನ ದಿನಗಳಲ್ಲಿ ಬರಿ ಸುಳ್ಳು ಸುದ್ದಿಗಳು, ಸುಳ್ಳು ಆರೋಪಗಳೂ ಸಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.ಆದ್ದರಿಂದ ಯುವಕರು ಸತ್ಯದ ಬಗ್ಗೆ ಒತ್ತುಕೊಟ್ಟು ಒಳ್ಳೆಯ ರೀತಿಯಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸಬೇಕಾಗಿದೆ.
  ಸಾಮಾಜಿಕ ಜಾಲತಾಣವಂತು ಮಾಹಿತಿ, ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಬಹು ದೊಡ್ಡ ವೇದಿಕೆಯಾಗಿ ಪರಿವರ್ತನೆಯಾಗಿದೆ. ಎರೆ-ಮರೆಯಲ್ಲಿದ್ದ ಸಾವಿರಾರು ಪ್ರತಿಭೆಗಳು ಇದರಿಂದ ಅನಾವರಣಗೊಂಡಿವೆ. ವ್ಯಾಪಾರ-ವ್ಯವಹಾರ ವೃದ್ಧಿಗೆ, ಮಾರಲು, ಕೊಂಡುಕೊಳ್ಳಲು, ಪ್ರಚಾರ ಮಾಡಲು ಉತ್ತಮ ವೇದಿಕೆಯಾಗಿದೆ. ಎಷ್ಟೋ ಯುವಕರು ಇದರ ಮೂಲಕ ಜೀವನ ರೂಪಿಸಿಕೊಂಡಿದ್ದಾರೆ.
  ಇತ್ತೀಚೆಗೆ  COVID-19 ಜಗತ್ತಿನಾದ್ಯಂತ ತನ್ನ ಹೆಜ್ಜೆ ಇಟ್ಟಾಗಿನಿಂದ, ದೇಶವೇ ಲಾಕ್ ಡೌನ್ ಆದ ಕಾರಣ ಸಾಮಾಜಿಕ ಜಾಲತಾಣ ಬಳಸುವವರ ಸಂಖ್ಯೆ ವೃದ್ಧಿಸಿದೆ.
ಸಂಗೀತ, ಚಲನಚಿತ್ರ, ವಿಜ್ಞಾನ-ತಂತ್ರಜ್ಞಾನ, ಸಾಹಸ ಹೀಗೆ ಮನೋರಂಜನಾ ಕಾರ್ಯಕ್ರಮಗಳು ಇಲ್ಲಿ ದೊರೆಯುತ್ತಿರುವುದರಿಂದ  ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
"ಇಂದಿನ ಯುವಕರೇ ಮುಂದಿನ ಪ್ರಜೆಗಳು" ಆದ ಕಾರಣ ಜಾಲತಾಣಗಳಲ್ಲಿ ಅತಿ ಹೆಚ್ಚು ಸಕ್ರಿಯರಾಗಿರುವ ಯುವಕರು ಸರಿಯಾದ ರೀತಿಯಲ್ಲಿ ಇದನ್ನು ಬಳಸಬೇಕಾಗಿದೆ. ಜಾಲತಾಣಗಳ ಮೂಲಕ ದೇಶ ವಿರೋಧಿ ಹೇಳಿಕೆ ಕೊಡುವುದು,ದೇಶಕ್ಕೆ ಮಾರಕವಾಗುವಂತಹ ಕೃತ್ಯ ಎಸಗುವುದನ್ನು ನಿಲ್ಲಿಸಿ ಒಳ್ಳೆಯ ರೀತಿಯಲ್ಲಿ ದೇಶಕ್ಕೆ ಹಾಗೂ ತಮಗೆ ಒಳಿತಾಗುವಂತಹ ಕೆಲಸ ಇದರ ಮೂಲಕ ಮಾಡಬೇಕಾಗಿದೆ.ತಮ್ಮಲಿರುವ ಪ್ರತಿಭೆ ಅನಾವರಣ ಮಾಡಿಕೊಳ್ಳಲು ಒಳ್ಳೆಯ ವೇದಿಕೆಯಾಗಿ ರೂಪಗೊಂಡಿದೆ.
   ಆದ್ದರಿಂದ ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ರೀತಿ ಬಳಸಿಕೊಂಡು ದೇಶ ಕಟ್ಟುವ ಕೆಲಸ ಮಾಡಬೇಕಾಗಿದೆ.ಆಗ ಮಾತ್ರ "ದೇಶ ನಮಗೇನು ಕೊಟ್ಟಿದೆ ಅನ್ನುವುದಕ್ಕಿಂತ ನಾವೇನು ದೇಶಕ್ಕೆ ಕೊಟ್ಟಿದ್ದೇವೆ" ಎಂಬ ಮಾತಿಗೆ ಉತ್ತರ ದೊರಕುತ್ತದೆ. ಇದರ ಮೂಲಕ ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ರೀತಿ ಬಳಸಿಕೊಂಡು ದೇಶವನ್ನು ಕಟ್ಟುವ ಕೆಲಸ ಮಾಡೋಣ..
ಜೈ ಹಿಂದ್ 🇮🇳

ಇಂತಿ ನಿಮ್ಮವ ✍️
🔹ಅಭಿಷೇಕ. ಜೆ. ಎಂ🔹

Twitter- @abhish_jm
Instagram- @abhish_jm



Sunday, April 5, 2020

"ನಾ ಕಂಡಂತೆ ನಮೋ"

"ನರೇಂದ್ರ ದಾಮೋದರದಾಸ್ ಮೋದಿ" ಹೆಸರಲ್ಲೇ ಒಂದು ಶಕ್ತಿ ಇದೆ. ಈ ಹೆಸರು ಕೇಳಿದರೆ ಮೈ ರೋಮಾಂಚನವಾಗುತ್ತದೆ. ಜಗತ್ತು ಕಂಡ ಅತ್ಯಂತ ಶ್ರೇಷ್ಠ, ಯಶಸ್ವಿ ಪ್ರಧಾನಮಂತ್ರಿ ಆಗಿ ನಮೋ ಹೊರಹೊಮ್ಮಿದ್ದಾರೆ. ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಅತ್ಯಂತ ದೀರ್ಘಕಾಲದವರೆಗೆ ಆಳಿದ ಹೆಗ್ಗಳಿಕೆ ಇವರದ್ದು.
ಸದಾ ಅಭಿವೃದ್ಧಿಯ ಕಡೆ ಚಿಂತಿಸುವ ವ್ಯಕ್ತಿತ್ವ. ೬೦ ವರ್ಷಗಳ ಕಾಂಗ್ರೆಸ್ ಆಡಳಿತದ ನಂತರ ಮೋದಿಜೀ ನಾಯಕತ್ವದಲ್ಲಿ ಬಿಜೆಪಿ ದೇಶದ ಚುಕ್ಕಾಣಿ ಹಿಡಿಯಿತು. "ಸಬ್ ಕಾ ಸಾಥ್ ಸಬ್ ಕಾ ವಿಕಾಸ್" ಎಂಬ ಧ್ಯೇಯ ವಾಕ್ಯದೊಂದಿಗೆ ಅಭಿವೃದ್ಧಿ ಮಂತ್ರ ಜಪಿಸುತ್ತಾ ಆಡಳಿತ ನಡೆಸಿ ಹಲವು ದಿಟ್ಟ ನಿರ್ಧಾರದೊಂದಿದೆ ದೇಶದ ಜನ- ಮನ ಗೆದ್ದಿದ್ದಾರೆ.
      ಹಿಂದಿನ ಯುಪಿಎ ಸರ್ಕಾರ ಮಾಡಿದ ಸಾಲವನ್ನತಿರಿಸಿ, ಅಕ್ಕ-ಪಕ್ಕ ದೇಶಗಳ ಜೊತೆ ಉತ್ತಮ ಸಂಬಂಧ ಬೆಸೆದು ಭಾರತವನ್ನು "ವಿಶ್ವಗುರು"ವಾಗಿಸುವತ್ತ ಶ್ರಮಿಸುತ್ತಿದ್ದಾರೆ. ಎರಡನೇ ಅವಧಿಗೆ ತಮ್ಮ ಸರ್ಕಾರವನ್ನು ಮುನ್ನಡೆಸುತ್ತಾ ಹಲವಾರು ಪ್ರಮುಖ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಪೂರ್ಣಗೊಳಿಸುತ್ತಿದ್ದಾರೆ. ನೆನೆಗುದಿಗೆ ಬಿದ್ದಿದ್ದ ಹಲವಾರು ಕಾರ್ಯಗಳು ಪೂರ್ಣಗೊಳ್ಳುತ್ತಿವೆ.ಅಮೆರಿಕ,ಇಸ್ರೇಲ್, ರಷ್ಯಾ, ಭೂತಾನ್,ನೇಪಾಳ್, ಹೀಗೆ ಹತ್ತು ಹಲವು ದೇಶದ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಮೋದಿ ಅವರ ಆಡಳಿತ ವೈಖರಿಯನ್ನು  ಶ್ಲಾಘಿಸುತ್ತಿದ್ದಾರೆ.
    ಇದೆಲ್ಲದರ ನಡುವೆ COVID-19 ಎಂಬ ಮಹಾಮಾರಿ ಇಡೀ ಜಗತ್ತನ್ನೇ ಆಕ್ರಮಿಸಿಕೊಂಡಿದೆ. ಜಗತ್ತಿನಲ್ಲೇ ಅತ್ಯಂತ ಸುಸಜ್ಜಿತ ವೈದ್ಯಕೀಯ ವ್ಯವಸ್ಥೆ ಹೊಂದಿರುವ ಅಮೆರಿಕ, ಇಟಲಿಹಂತಹ ರಾಷ್ಟ್ರಗಳು ಕೊರೋನ ರೋಗಕ್ಕೆ ತುತ್ತಾಗಿ ನಿವಾರಿಸಲಾಗದೆ ಕೈ ಕಟ್ಟಿ ಕುಳಿತಿವೆ. ಇಂತ ಹೊತ್ತಲ್ಲೇ ಭಾರತದ ಪ್ರಧಾನಿ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡು ದೇಶವನ್ನೇ ಲಾಕ್ ಡೌನ್ ಮಾಡಿ ಕೋರೋನ  ತಡೆಗಟ್ಟುವಲ್ಲಿ ಯಶಸ್ವಿ ಆಗುತ್ತಿದ್ದಾರೆ. ನನ್ನ ಪ್ರಕಾರ ಇಡೀ ದೇಶ ಮೊಟ್ಟ ಮೊದಲ ಬಾರಿಗೆ ಜನತಾ ಕರ್ಫ್ಯೂಗೆ ಅಭೂತ ಪೂರ್ವ ಬೆಂಬಲ ಸೂಚಿಸಿದೆ. ಪ್ರಧಾನಿಮಂತ್ರಿಯ ಒಂದು ಕರೆ ಇಡೀ ದೇಶ ಒಳಿತಿಗಾಗಿ ಎಂಬುದು ಎಲ್ಲರಿಗೂ ಮನದಟ್ಟಾಗಿದೆ ಹಾಗೂ ಇದರಿಂದ ವೈದ್ಯರು, ಪೊಲೀಸರು, ನರ್ಸ್ ಗಳು, ಪೌರಕಾರ್ಮಿಕರಿಗೆ ದೇಶವೇ ಎದ್ದು ನಿಂತು ಚಪ್ಪಾಳೆ, ಗಂಟೆ ಬಾರಿಸಿ ಗೌರವ ಸೂಚಿಸಿದೆ.
   ಇದಲ್ಲದೆ ಅಮೆರಿಕಾ, ಆಸ್ಟ್ರೇಲಿಯ, ಇಸ್ರೇಲ್ ಸೇರಿ ಹಲವು ರಾಷ್ಟ್ರಗಳು COVID-19 ಟಾಸ್ಕ್ ಫೋರ್ಸ್ ನ ನೇತೃತ್ವ ವಹಿಸುವಂತೆ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತಿದ್ದಾರೆ. ಇದೊಂದೇ ಉದಾಹರಣೆ ಸಾಕು ಮೋದಿಯವರ ನಾಯಕತ್ವ ಗುಣ ಮತ್ತು ಅವರು ಭಾರತವನ್ನು ವಿಶ್ವಗುರುವಾಗಿಸುವತ್ತ ಶ್ರಮಿಸುತ್ತಿರುವುದು ಗೊತ್ತಾಗಿ ಬಿಡುತ್ತದೆ. ಮೋದಿ ಅವರ ಬಗ್ಗೆ ಬರೆಯುತ್ತಾ ಹೋದರೆ ಪುಟಗಳೇ ಸಾಲದು ಹಾಗೆಯೇ ಅವರ ವ್ಯಕ್ತಿತ್ವ ಮತ್ತು ಅವರ ವರ್ಚಸ್ಸು... 
ಇಲ್ಲಿಗೆ ನನ್ನ ಬರವಣಿಗೆಯನ್ನು ಮುಗಿಸುತ್ತ,ಮೋದಿಯವರಿಗೆ ಆ ಭಗವಂತ ಆರೋಗ್ಯ, ಆಯಸ್ಸು,ಶಕ್ತಿಯನ್ನು ಕೊಡಲಿ ಎಂದು ಆಶಿಸುತ್ತೇನೆ. ಹಾಗೆಯೇ ನನ್ನ ದೇಶ COVID-19 ಇಂದ ಬೇಗ ಗುಣಮುಖವಾಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
 ಓದಿದ ಎಲ್ಲರಿಗೂ ನನ್ನ ಧನ್ಯವಾದಗಳು..
ಜೈ ಹಿಂದ್ 🇮🇳

ಇಂತಿ ನಿಮ್ಮವ ✍️
ಅಭಿಷೇಕ್. ಜೆ. ಎಂ

Twitter:- @abhish_jm
Instagram:- @abhish_jm

ಜೊತೆಗಿರದ ಜೀವ ಎಂದಿಗೂ ಜೀವಂತ !

   ನಮ್ಮ ಪ್ರೀತಿಯ ಪುನೀತ್ ರಾಜಕುಮಾರ್ ನಮ್ಮನ್ನ ಅಗಲಿದ್ದಾರೆ.ತುಂಬಾ ದಿನಗಳಿಂದ ಅವರ ಬಗ್ಗೆ ಬರೆಯಬೇಕು ಅಂತ ಅನ್ನಿಸ್ತಿತ್ತು. ಅಷ್ಟೊಂದು ವಿಸ್ತಾರವಾಗಿ ಅಲ...