ಪ್ರಪಂದಾದ್ಯಂತ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು. ಇಲ್ಲಿನ ರಾಜವಂಶಸ್ಥರಿಗೆ ಜ್ಞಾನಾರ್ಜನೆ ಮಾಡುವುದೇ ಮುಖ್ಯ ಉದ್ದೇಶ,ಆದ್ದರಿಂದ ರಾಜರುಗಳ ಇಚ್ಛೆಯಂತೆಯೇ ಯಾವ ವಿದ್ಯಾರ್ಥಿಗಳಿಗೂ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಹಾಗೂ ವಸತಿಯ ಶುಲ್ಕ ಇರಲಿಲ್ಲ.
Harvard of Ancient India
ವಿದ್ಯಾರ್ಥಿಗಳಲ್ಲಿ ಧ್ಯಾನ ಹಾಗೂ ಜ್ಞಾನದ ವೃದ್ಧಿಗಾಗಿ ವಿಶ್ವವಿದ್ಯಾಲಯವು ಶ್ರಮಿಸುತ್ತಿತ್ತು.12 ನೇ ಶತಮಾನದವರೆಗೂ ವಿಶ್ವವಿದ್ಯಾಲಯವು ಅತ್ಯಂತ ಶ್ರದ್ಧೆಯಿಂದ ತನ್ನ ಕಾರ್ಯವನ್ನು ನಿರ್ವಹಿಸುತ್ತಿತ್ತು.
ನಂತರದಲ್ಲಿ ಭಕ್ತಿಯಾರ್ ಖಿಲ್ಜಿಯ ಆಕ್ರಮಣಕ್ಕೊಳಗಾಗಿ ನಳಂದ ವಿಶ್ವವಿದ್ಯಾಲಯವು ನೆಲಸಮವಾಯಿತು.ಖಿಲ್ಜಿಯು ವಿಶ್ವವಿದ್ಯಾಲಯದಲ್ಲಿದ್ದ ಅನೇಕ ಅಮಾಯಕ ಬೌದ್ಧ ಸನ್ಯಾಸಿಗಳನ್ನು ಜೀವಂತವಾಗಿ ಸುಟ್ಟ ಅಲ್ಲದೇ ಬೌದ್ಧರನ್ನು ಭಾರತದಿಂದ ಹೊರದೂಡುವ ಎಲ್ಲ ಪ್ರಯತ್ನಗಳನ್ನು ಮಾಡಿದ.ಈ ರೀತಿ ಖಿಲ್ಜಿಯು ಅಮಾನುಷವಾಗಿ ವರ್ತಿಸಿ ತನ್ನ ಪಾರುಪತ್ಯವನ್ನ ಮೆರೆದ.ಇದರಿಂದ ಬರಿ ಭಾರತಕ್ಕಲ್ಲ ಇಡಿಯ ಜಗತ್ತಿಗೆ ನಷ್ಟ ಉಂಟು ಮಾಡಿತು.
ವಿದ್ಯಾರ್ಥಿಗಳ ನೆಚ್ಚಿನ ಗ್ರಂಥಾಲಯ-ಧರ್ಮಕುಂಜ
ಕುಂಜ ಅಂದರೆ ಜ್ಞಾನದ ಶಿಖರ. ನಳಂದ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಜ್ಞಾನ ಶಿಖರದ್ದಂತಿತ್ತು.ಅಲ್ಲಿನ ಧರ್ಮಕುಂಜ ಗ್ರಂಥಾಲಯವು ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಹೊಂದಿತ್ತು.ಆಗಿನ ಕಾಲ ಘಟ್ಟದಲ್ಲಿ ಮುದ್ರಣಯಂತ್ರದ ವ್ಯವಸ್ಥೆ ಇರದ ಕಾರಣ ಎಲ್ಲವು ಕೈಯಿಂದ ಬರೆಯಲ್ಪಟ್ಟಿತ್ತು,ಹಾಗಾಗಿ ಪುಸ್ತಕವು ನಳಂದ ಬಿಟ್ಟರೆ ಜಗತ್ತಿನ ಬೇರೆಲ್ಲೂ ಲಭ್ಯವಿರುತ್ತಿರಲಿಲ್ಲ.
ಮೊಘಲರ ಕಾಲದಲ್ಲಿ ಪುಸ್ತಕಗಳನ್ನು ಬೆಂಕಿಗೆ ಆಹುತಿ ಮಾಡಿದಾಗ ಇಡೀ ಪುಸ್ತಕಗಳು ಸುಡಲು ಕನಿಷ್ಠ 3 ತಿಂಗಳ ಸಮಯಬೇಕಾಯಿತು ಎಂದು ಇತಿಹಾಸ ಹೇಳುತ್ತದೆ.ಇದರಲ್ಲೇ ನಾವು ಊಹೆ ಮಾಡಿಕೊಳ್ಳಬಹುದು ಪುಸ್ತಕಗಳ ಸಂಗ್ರಹ ಎಷ್ಟಿತ್ತೆಂದು.ಹೀಗಾಗಿ ನಳಂದ ವಿಶ್ವವಿದ್ಯಾಲಯವು ಜ್ಞಾನ ಭಂಡಾರಕ್ಕೇ ಉದಾಹರಣೆಯಾಗಿ ನಿಲ್ಲುತ್ತದೆ.
ಪುಸ್ತಕದ ಪುಟಗಳು ಇಂಕ್ ನಿಂದ ಮುದ್ರಿತವಾಗಿರಬಹುದು.ಆದರೆ ಅವುಗಳು ಸಮಯ ಸಾಧಿಸುವ ಯಂತ್ರಗಳು. ಪುಸ್ತಕಗಳು ಹಿಂದೆ ನಡೆದದ್ದು ಹೇಳುತ್ತವೆ, ಭವಿಷ್ಯದ ಬಗ್ಗೆ ಎಚ್ಚರಿಸುತ್ತವೆ, ವರ್ತಮಾನದ ಬಗ್ಗೆ ಪರಿಚಯಿಸುತ್ತವೆ.

ನಳಂದ ವಿಶ್ವವಿದ್ಯಾಲಯವು ಕಾರ್ಯ ನಿರ್ವಹಿಸುತ್ತಿದ್ದ ಕಾಲದಲ್ಲಿ ಭಾರತದ ಜ್ಞಾನ ಭಂಡಾರವು ಪ್ರಪಂಚ ಎಲ್ಲಾ ದೇಶಗಳ ಜ್ಞಾನ ಭಂಡಾರಕಿಂತಲು ಮುಂದುವರೆದದ್ದಾಗಿತ್ತು,ಈಗಲೂ ಹಾಗೇ ಇದೆ.ನಳಂದ ವಿಶ್ವವಿದ್ಯಾಲಯವು ಭಾರತ ದೇಶದ ಇತಿಹಾಸ, ಸಂಸ್ಕೃತಿ, ವೈಭೋಗವನ್ನ ನಮ್ಮೆಲ್ಲರ ಕಣ್ಣೆದುರಿಗೆ ತೆರೆದಿಟ್ಟಿದೆ.
2010 ರಲ್ಲಿ ಭಾರತ ಸರ್ಕಾರವು ಹೊಸ ರೂಪವನ್ನು ನೀಡಿ ನವ ನಳಂದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ಇದು "Institution of National Importance" ಮೇಲೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ.
ಹೀಗೆಯೇ ನಳಂದ ವಿಶ್ವವಿದ್ಯಾಲಯವು ತನ್ನ ಕಾರ್ಯ ವೈಖರಿಯನ್ನು ಮುಂದುವರೆಸಿ ಪ್ರಪಂಚಕ್ಕೆ ಪ್ರಥಮ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿ ತನ್ನ ಪಾರುಪತ್ಯವನ್ನ ಮೆರೆಯಲಿ ಎಂದು ಆಶಿಸುತ್ತೇನೆ...
ಜೈ ಹಿಂದ್ 🇮🇳
✍️ಇಂತಿ ನಿಮ್ಮವ ✍️
🔹ಅಭಿಷೇಕ.ಜೆ.ಎಂ🔹
Twitter :- @abhish_jm
Instagram :- @abhish_jm
No comments:
Post a Comment