Tuesday, July 28, 2020

"ನಳಂದ ವಿಶ್ವವಿದ್ಯಾಲಯ- Harvard of Ancient India"


ನಳಂದ ವಿಶ್ವವಿದ್ಯಾಲಯ - ಇದು ಪ್ರಪಂಚದ ಪ್ರಥಮ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ. ಕ್ರಿಸ್ತ ಪೂರ್ವ 427 ರ ಗುಪ್ತರ ಆಳ್ವಿಕೆಯಲ್ಲಿ ರಾಜ ಕುಮಾರಗುಪ್ತ-೧ ಬಿಹಾರದ ರಾಜ್ಗಿರ್ ನಲ್ಲಿ ಇದನ್ನು ಸ್ಥಾಪಿಸಿದ. ಇದರ ಮೂಲ ಉದ್ದೇಶ ಸರ್ವರಿಗೂ ಶಿಕ್ಷಣ ಒದಗಿಸುವುದಾಗಿತ್ತು.

ಪ್ರಪಂದಾದ್ಯಂತ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು. ಇಲ್ಲಿನ ರಾಜವಂಶಸ್ಥರಿಗೆ ಜ್ಞಾನಾರ್ಜನೆ ಮಾಡುವುದೇ  ಮುಖ್ಯ ಉದ್ದೇಶ,ಆದ್ದರಿಂದ ರಾಜರುಗಳ ಇಚ್ಛೆಯಂತೆಯೇ ಯಾವ ವಿದ್ಯಾರ್ಥಿಗಳಿಗೂ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಹಾಗೂ ವಸತಿಯ ಶುಲ್ಕ ಇರಲಿಲ್ಲ.

Harvard of Ancient India

ವಿದ್ಯಾರ್ಥಿಗಳಲ್ಲಿ ಧ್ಯಾನ ಹಾಗೂ ಜ್ಞಾನದ ವೃದ್ಧಿಗಾಗಿ ವಿಶ್ವವಿದ್ಯಾಲಯವು ಶ್ರಮಿಸುತ್ತಿತ್ತು.12 ನೇ ಶತಮಾನದವರೆಗೂ ವಿಶ್ವವಿದ್ಯಾಲಯವು ಅತ್ಯಂತ ಶ್ರದ್ಧೆಯಿಂದ ತನ್ನ ಕಾರ್ಯವನ್ನು ನಿರ್ವಹಿಸುತ್ತಿತ್ತು. 

ನಂತರದಲ್ಲಿ ಭಕ್ತಿಯಾರ್ ಖಿಲ್ಜಿಯ ಆಕ್ರಮಣಕ್ಕೊಳಗಾಗಿ ನಳಂದ ವಿಶ್ವವಿದ್ಯಾಲಯವು ನೆಲಸಮವಾಯಿತು.ಖಿಲ್ಜಿಯು ವಿಶ್ವವಿದ್ಯಾಲಯದಲ್ಲಿದ್ದ ಅನೇಕ  ಅಮಾಯಕ ಬೌದ್ಧ ಸನ್ಯಾಸಿಗಳನ್ನು ಜೀವಂತವಾಗಿ ಸುಟ್ಟ ಅಲ್ಲದೇ ಬೌದ್ಧರನ್ನು ಭಾರತದಿಂದ ಹೊರದೂಡುವ ಎಲ್ಲ ಪ್ರಯತ್ನಗಳನ್ನು ಮಾಡಿದ.ಈ ರೀತಿ ಖಿಲ್ಜಿಯು ಅಮಾನುಷವಾಗಿ ವರ್ತಿಸಿ ತನ್ನ ಪಾರುಪತ್ಯವನ್ನ ಮೆರೆದ.ಇದರಿಂದ ಬರಿ ಭಾರತಕ್ಕಲ್ಲ ಇಡಿಯ ಜಗತ್ತಿಗೆ ನಷ್ಟ ಉಂಟು ಮಾಡಿತು.


 ವಿದ್ಯಾರ್ಥಿಗಳ ನೆಚ್ಚಿನ ಗ್ರಂಥಾಲಯ-ಧರ್ಮಕುಂಜ

ಕುಂಜ ಅಂದರೆ ಜ್ಞಾನದ ಶಿಖರ. ನಳಂದ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಜ್ಞಾನ ಶಿಖರದ್ದಂತಿತ್ತು.ಅಲ್ಲಿನ ಧರ್ಮಕುಂಜ ಗ್ರಂಥಾಲಯವು ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಹೊಂದಿತ್ತು.ಆಗಿನ ಕಾಲ ಘಟ್ಟದಲ್ಲಿ ಮುದ್ರಣಯಂತ್ರದ ವ್ಯವಸ್ಥೆ ಇರದ ಕಾರಣ ಎಲ್ಲವು ಕೈಯಿಂದ ಬರೆಯಲ್ಪಟ್ಟಿತ್ತು,ಹಾಗಾಗಿ ಪುಸ್ತಕವು ನಳಂದ ಬಿಟ್ಟರೆ ಜಗತ್ತಿನ ಬೇರೆಲ್ಲೂ ಲಭ್ಯವಿರುತ್ತಿರಲಿಲ್ಲ.


ಮೊಘಲರ ಕಾಲದಲ್ಲಿ ಪುಸ್ತಕಗಳನ್ನು ಬೆಂಕಿಗೆ ಆಹುತಿ ಮಾಡಿದಾಗ ಇಡೀ ಪುಸ್ತಕಗಳು ಸುಡಲು  ಕನಿಷ್ಠ 3 ತಿಂಗಳ ಸಮಯಬೇಕಾಯಿತು ಎಂದು ಇತಿಹಾಸ ಹೇಳುತ್ತದೆ.ಇದರಲ್ಲೇ ನಾವು ಊಹೆ ಮಾಡಿಕೊಳ್ಳಬಹುದು ಪುಸ್ತಕಗಳ ಸಂಗ್ರಹ ಎಷ್ಟಿತ್ತೆಂದು.ಹೀಗಾಗಿ ನಳಂದ ವಿಶ್ವವಿದ್ಯಾಲಯವು ಜ್ಞಾನ ಭಂಡಾರಕ್ಕೇ ಉದಾಹರಣೆಯಾಗಿ ನಿಲ್ಲುತ್ತದೆ. 


ಪುಸ್ತಕದ ಪುಟಗಳು  ಇಂಕ್ ನಿಂದ ಮುದ್ರಿತವಾಗಿರಬಹುದು.ಆದರೆ ಅವುಗಳು ಸಮಯ ಸಾಧಿಸುವ ಯಂತ್ರಗಳು. ಪುಸ್ತಕಗಳು ಹಿಂದೆ ನಡೆದದ್ದು ಹೇಳುತ್ತವೆ, ಭವಿಷ್ಯದ ಬಗ್ಗೆ ಎಚ್ಚರಿಸುತ್ತವೆ, ವರ್ತಮಾನದ ಬಗ್ಗೆ ಪರಿಚಯಿಸುತ್ತವೆ.



ನಳಂದ ವಿಶ್ವವಿದ್ಯಾಲಯವು ಕಾರ್ಯ ನಿರ್ವಹಿಸುತ್ತಿದ್ದ ಕಾಲದಲ್ಲಿ ಭಾರತದ ಜ್ಞಾನ ಭಂಡಾರವು ಪ್ರಪಂಚ ಎಲ್ಲಾ ದೇಶಗಳ ಜ್ಞಾನ ಭಂಡಾರಕಿಂತಲು ಮುಂದುವರೆದದ್ದಾಗಿತ್ತು,ಈಗಲೂ ಹಾಗೇ ಇದೆ.ನಳಂದ ವಿಶ್ವವಿದ್ಯಾಲಯವು ಭಾರತ ದೇಶದ ಇತಿಹಾಸ, ಸಂಸ್ಕೃತಿ, ವೈಭೋಗವನ್ನ ನಮ್ಮೆಲ್ಲರ ಕಣ್ಣೆದುರಿಗೆ ತೆರೆದಿಟ್ಟಿದೆ.


2010 ರಲ್ಲಿ ಭಾರತ ಸರ್ಕಾರವು ಹೊಸ ರೂಪವನ್ನು ನೀಡಿ ನವ ನಳಂದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ಇದು "Institution of National Importance" ಮೇಲೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ.

ಹೀಗೆಯೇ ನಳಂದ ವಿಶ್ವವಿದ್ಯಾಲಯವು ತನ್ನ ಕಾರ್ಯ ವೈಖರಿಯನ್ನು ಮುಂದುವರೆಸಿ ಪ್ರಪಂಚಕ್ಕೆ ಪ್ರಥಮ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯವಾಗಿ  ಹೊರಹೊಮ್ಮಿ ತನ್ನ  ಪಾರುಪತ್ಯವನ್ನ ಮೆರೆಯಲಿ ಎಂದು ಆಶಿಸುತ್ತೇನೆ...

ಜೈ ಹಿಂದ್ 🇮🇳

✍️ಇಂತಿ ನಿಮ್ಮವ ✍️

🔹ಅಭಿಷೇಕ.ಜೆ.ಎಂ🔹


Twitter :- @abhish_jm
Instagram :- @abhish_jm

Friday, May 29, 2020

"ಸ್ವಾತಂತ್ರವೀರ ಸಾವರ್ಕರ್"



ಸಾವರ್ಕರ್ ಎಂದರೆ ಕಿಚ್ಚು,
ಸಾವರ್ಕರ್ ಎಂದರೆ ಶಕ್ತಿ,
ಸಾವರ್ಕರ್ ಎಂದರೆ ಆತ್ಮಾಭಿಮಾನ,
ಸಾವರ್ಕರ್ ಎಂದರೆ ದೇಶಭಕ್ತಿ,
ಸಾವರ್ಕರ್ ಎಂದರೆ ಸಮರ್ಪಣೆ.

"ಸ್ವಾತಂತ್ರವೀರ ವಿನಾಯಕ ದಾಮೋದರ ಸಾವರ್ಕರ್".


ಆ ವೀರ ಕಲಿಯ ಹೆಸರು ಕೇಳಿದರೆ ಮೈ ರೋಮಾಂಚನಗೊಳ್ಳುತ್ತದೆ.1883 ಮೇ 28 ರಂದು ಮಹಾರಾಷ್ಟ್ರದ ನಾಸಿಕ್ ನ ಭಗೂರ್ ಗ್ರಾಮದ ದಾಮೋದರ ಸಾವರ್ಕರ್ ಮತ್ತು ಯಶೋದಾ ಸಾವರ್ಕರ್ ದಂಪತಿಗೆ ಜನಿಸಿದ ವಿನಾಯಕರು ಮುಂದೆ ವೀರ ಸಾವರ್ಕರ್ ಆಗಿ ಬೆಳೆದು ನಿಂತರು. ಚಾಪೇಕರ್ ಸಹೋದರರ ಸಾಹಸವೇ ಸಾವರ್ಕರ್ ರಿಗೆ ದಾರಿದೀಪ. ಭಾಷಣ, ಸಂಘಟನೆ, ಚಳುವಳಿ, ಬರವಣಿಗೆಯ ಮೂಲಕ ದೇಶಭಕ್ತರಿಗೆ ಅರಿವು ಮತ್ತು ಕ್ರಾಂತಿ ಮೂಡಿಸುತ್ತಿದ್ದರು.
ಸ್ನೇಹಿತರನ್ನು ಒಟ್ಟುಗೂಡಿಸಿ 'ಅಭಿನವ ಭಾರತ' ವನ್ನು ಸ್ಥಾಪಿಸಿ ದೇಶಸೇವೆ ಮಾಡುತ್ತಿದ್ದರು.ಬಾಲಗಂಗಾಧರ ತಿಲಕರ ಸಮ್ಮುಖದಲ್ಲಿ ವಿದೇಶಿ ಬಟ್ಟೆ ಮತ್ತು ವಿದೇಶಿ ನಿರ್ಮಿತ ವಸ್ತುಗಳನ್ನು ಕಲೆಹಾಕಿ ಅವುಗಳನ್ನೆಲ್ಲ ಸುಟ್ಟು ಭಸ್ಮಮಾಡಿ ದೇಶಪ್ರೇಮವನ್ನು ಮೆರೆದರು.ಅಭಿನವ ಭಾರತದ ಸ್ನೇಹಿತರು ತಮ್ಮ ದೇಶ ಸೇವೆ ಮುಂದುವರೆಸಿದ್ದರು. ಆದರೆ ಸಾವರ್ಕರ್
ತದನಂತರದಲ್ಲಿ ಸ್ಕಾಲರ್ ಶಿಪ್ ಪಡೆದು ತಿಲಕರ ನೆರವಿನೊಂದಿಗೆ ಉನ್ನತ ಶಿಕ್ಷಣಕ್ಕಾಗಿ ಲಂಡನ್ ನ ಗ್ರೇಸ್ ಇನ್ ಲಾ ಕಾಲೇಜು ಸೇರಿದರು.  ಶಾಮ್ ಜೀ ಕೃಷ್ಣ ಶರ್ಮಾ ಅವರು ನಡೆಸುತ್ತಿದ್ದ ಭಾರತ್ ಭವನ್ ನಲ್ಲಿ ಉಳಿದುಕೊಂಡಿದ್ದರು.


   

ಸಾವರ್ಕರ್ ಬಗ್ಗೆ ಕೇಳಿದಾಗಲೆಲ್ಲ  ಮದನ್ ಲಾಲ್ ದಿಂಗ್ರನ ಸಾಹಸಗಾದೆ ನೆನಪಾಗುತ್ತದೆ.

               

ಪಂಜಾಬ್ ಮೂಲದ ಶ್ರೀಮಂತ ಕುಟುಂಬದಿಂದ ಬಂದಿದ್ದ ಮದನ್ ಲಾಲ್ ದಿಂಗ್ರನ ಪರಿಚಯವಾಯಿತು. ಸಾವರ್ಕರ್ ರ ರಾಷ್ಟ್ರಪ್ರೇಮ,ನಾಯಕತ್ವ ಗುಣ,ಭಾಷಣ, ಬರವಣಿಗೆಯಿಂದ ಪ್ರೇರಣೆಗೊಂಡು ಸ್ವಾತಂತ್ಯ ಹೋರಾಟದಲ್ಲಿ ಭಾಗವಹಿಸಲು ನಿರ್ಧರಿಸಿದ.ಸಾವರ್ಕರ್ ರ ಒಂದೇ ಮಾತಿಗೆ  ದಿಂಗ್ರ ಬ್ರಿಟಿಷ್ ಅಧಿಕಾರಿ ಕರ್ಝನ್ ವೇಯ್ಲಿಯ ಎದೆಸೀಳಿ ,ತಾನು ವಿದೇಶದಲ್ಲಿ ಗಲ್ಲಿಗೇರಿದ ಮೊದಲ ಭಾರತೀಯ ಕ್ರಾಂತಿಕಾರೀಯಾಗಿ ವಂದೇಮಾತರಂ ಎಂದು ಹೇಳಿ ಹುತಾತ್ಮನಾದ.
ನಂತರದಲ್ಲಿ ಅನೇಕರು ಸಾವರ್ಕರ್ ಸಂಪರ್ಕಕ್ಕೆ ಬಂದು ದೇಶಕ್ಕಾಗಿ ಸ್ವಾತಂತ್ರ್ಯ  ತಂದುಕೊಡಲು ಸನ್ನದ್ಧರಾದರು. ಸಾವರ್ಕರ್ ರ ಸಲಹೆಯ ಮೇರೆಗೆ ನೇತಾಜಿ ಸುಭಾಷ್ ಚಂದ್ರಬೋಸ್ ಸೈನ್ಯ ಕಟ್ಟಿ ಜಪಾನ್, ಜರ್ಮನಿ ಹಾಗೂ ಇತರ ದೇಶಗಳ ಸಹಾಯ ಪಡೆದು ಬ್ರಿಟಿಷರ ಮೇಲೆ ದಾಳಿ ಮಾಡಿದರು.ಅಸ್ಪೃಶ್ಯತೆಯನ್ನು ಹೋಗಲಾಡಿಸಿ ಕೆಳವರ್ಗದವರಿಗೂ ದೇವಸ್ತಾನಕ್ಕೆ ಪ್ರವೇಶ ಕಲ್ಪಿಸಿದರು. ಸಾವರ್ಕರ್ ಅಂದ್ರೇನೆ ಹಾಗೆ ಅದೊಂದು ಕಿಚ್ಚು, ಶಕ್ತಿ,ದೇಶಪ್ರೇಮ.

                 

 ಸಾವರ್ಕರ್ ಒಬ್ಬ ಚಿಂತಕ ಕೂಡ ಆಗಿದ್ದರು. ಬ್ರಿಟಿಷರ 1857 ರಲ್ಲಿ ನಡೆದ ಕ್ರಾಂತಿಯನ್ನು ಸಿಪಾಯಿ ದಂಗೆ  ಎಂದು ಕರೆದರೆ ಸಾವರ್ಕರ್ ಅದನ್ನು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಹೇಳಿದರು. ಅದನ್ನಾದರಿಸಿ
'The Indian War of Independence' ಎಂಬ ಪುಸ್ತಕವನ್ನೇ ಬರೆದರು.ಬ್ರಿಟಿಷ ಸರ್ಕಾರ ಭಯಗೊಂಡು ಪುಸ್ತಕದ ಮಾರಾಟವನ್ನು ನಿಷೇಧಿಸಿತು. ಬ್ರಿಟಿಷರಲ್ಲಿ ಅಷ್ಟು ಭೀತಿಯನ್ನು ಈ ಪುಸ್ತಕ ಮೂಡಿಸಿತ್ತು.
ಮುಂದೆ ಇದೇ ಪುಸ್ತಕ ಭಗತ್ ಸಿಂಗ್, ಆಝಾದ್, ರಾಜಗುರು,ಸುಖದೇವ್ ಮುಂತಾದ ಕ್ರಾಂತಿಕಾರಿಗಳಿಗೆ ಸ್ವಾತಂತ್ರ್ಯ ಕೈಪಿಡಿಯಾಗಿ ಮಾರ್ಪಟ್ಟಿತು.
1910 ರಲ್ಲಿ ಬ್ರಿಟಿಷ್ ಸರ್ಕಾರ ಅವರನ್ನು ಬಂಧಿಸಿತು. ಅಂಡಮಾನ್ ಜೈಲಿನಲ್ಲಿ ಕಾಲಪಾನಿ ಶಿಕ್ಷೆ ವಿಧಿಸಿತು. ಬರೋಬ್ಬರಿ 50 ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯುವ ಹಾಗೆ ಮಾಡಿತು. ಆದರೆ ಸಾವರ್ಕರ್ ರ ರಾಷ್ಟ್ರಪ್ರೇಮ ಇನ್ನು ಇಮ್ಮಡಿಯಾಯಿತು. ಜೈಲಿನ ಗೋಡೆಗಳ ಮೇಲೆ ಕಲ್ಲಿನಲ್ಲಿ ಕ್ರಾಂತಿಗೀತೆ,ದೇಶಭಕ್ತಿ ಗೀತೆಗಳನ್ನು ರಚಿಸಿದರು. ಮತಾಂತರವನ್ನು ತಡೆದರು.ಕೆಲವರನ್ನು ಮಾತೃ ಧರ್ಮಕ್ಕೆ ಕರೆತಂದರು. ಜೈಲಿನಲ್ಲಿಯೇ 'Hindutva;Who is hindu ?' ಪುಸ್ತಕವನ್ನೇ ಬರೆದರು. ಹಿಂದೂ, ಜೈನ, ಬೌದ್ಧ, ಸಿಖ್ ಎಲ್ಲವು ಒಂದೇ ಎಂದು ಹೇಳಿ
ಅಖಂಡ ಭಾರತ ದ ಪರಿಕಲ್ಪನೆಯನ್ನಿಟ್ಟರು.
1921 ರಲ್ಲಿ ಜೈಲಿನಿಂದ ಬಿಡುಗಡೆಗೊಂಡು
'ಹಿಂದೂ ಮಹಾಸಭಾ' ದ ನೇತೃತ್ವ ವಹಿಸಿಕೊಂಡು ಏಳು ವರ್ಷಗಳ ಕಾಲ ಅದರ ಅಧ್ಯಕ್ಷರಾಗಿ ಧರ್ಮ ಕಟ್ಟುವುದರಲ್ಲಿ ನಿರತರಾದರು. ಗಣೇಶ ಚತುರ್ಥಿ, ಹೋಳಿ ಹಬ್ಬ ಆಚರಿಸುವುದರ ಮೂಲಕ ಸ್ವಧರ್ಮಿರನ್ನು ಒಗ್ಗೂಡಿಸುವ  ಕೆಲಸ ಮಾಡಿದರು.
ಭಾರತ ಸ್ವಾತಂತ್ರ ಪಡೆಯುವುದರಲ್ಲಿ ಕ್ರಾಂತಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದು. ಮುಸ್ಲಿಮರು ದೇಶದ ವಿಭಜನೆಯ ಮಾತೆತ್ತಿದಾಗ ಸಾವರ್ಕರ್ ರು ವಿರೋಧಿಸಿದರು.

"ನೀವು ಬಂದರೆ ನಿಮ್ಮ ಜೊತೆ
ಬರದಿದ್ದರೆ ನಿಮ್ಮನ್ನು ಬಿಟ್ಟು
ಅಡ್ಡ ಬಂದರೆ ನಿಮ್ಮನ್ನೇ ಮೆಟ್ಟಿ
ಸ್ವಾತಂತ್ರಗಳಿಸುತ್ತವೆ" ಎಂದು ಹೇಳಿ ಎಚ್ಚರಿಸಿದರು.

             
ಸಾವರ್ಕರ್ ತಾವು ನಂಬಿದ್ದ ಸಿದ್ದಾಂತಕ್ಕೆ ಕಟಿಬದ್ಧರಾಗಿದ್ದರು.ಎಂದಿಗೂ ಬ್ರಿಟಿಷರೊಂದಿಗೆ ಕಾಂಪ್ರಮೈಸ್ ಆಗಿರಲಿಲ್ಲ.ತಮಗನ್ನಿಸಿದ ರೀತಿಯಲ್ಲೇ ಹೋರಾಟ ಮುಂದುವರೆಸಿದರು.ಸ್ವಾತಂತ್ರ ಪಡೆಯುವಲ್ಲಿ ಯಶಸ್ವಿಯಾದರು. ನಂತರ ಭಾರತ ಸ್ವಾತಂತ್ರ ಪಡೆದ ಸಂತೋಷಕ್ಕಿಂತ ದೇಶ ವಿಭಜನೆಯಾದ ದುಃಖದಲ್ಲಿ ಮುಳುಗಿದರು.ಆರೋಗ್ಯವು ಕ್ಷೀಣಿಸುತ್ತಾ ಹೋಗಿತು. ಆಹಾರ ಸೇವನೆಯನ್ನು ನಿಲ್ಲಿಸಿ ಬಿಟ್ಟರು.
1966 ಫೆಬ್ರವರಿ 26 ರಂದು ದೇಹ ತ್ಯಜಿಸಿದರು.
ಭಾರತ ಇರುವವರೆಗೂ ಸಾವರ್ಕರ್ ಅವರ ತ್ಯಾಗ, ಬಲಿದಾನಗಳು ಅಮರವಾಗಿ ಉಳಿಯಲಿವೆ.
ಸಾವರ್ಕರ್ ಅವರನ್ನು ಟೀಕಿಸುವ ಬದಲು ಅವರಲ್ಲಿದ್ದ ರಾಷ್ಟ್ರಪ್ರೇಮವನ್ನು ಅಳವಡಿಸಿಕೊಂಡು ಭಾರತವನ್ನು 'ವಿಶ್ವಗುರು'ವನ್ನಾಗಿ ಮಾಡೋಣ.

ಜೈ ಹಿಂದ್ 🇮🇳

ಇಂತಿ ನಿಮ್ಮವ ✍️

🔹ಅಭಿಷೇಕ.ಜೆ.ಎಂ 🔹

Twitter :- @abhish_jm

Instagram :- @abhish_jm














Tuesday, April 14, 2020

'D-Mart' ಬಗ್ಗೆ ನಿಮಗೆಷ್ಟು ಗೊತ್ತು..?!!




  "D-Mart" ಎಲ್ಲರಿಗೂ ಚಿರಪರಿಚಿತ.ಇದು ಭಾರತದ ಅತಿದೊಡ್ಡ ಸೂಪರ್ ಮಾರ್ಕೆಟ್ ಚೈನ್.ಅತ್ಯಂತ ಕಡಿಮೆ ಬೆಲೆಗೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಬಹುದಾದ ಮಾರ್ಕೆಟ್.ಇಲ್ಲಿ ದಿನನಿತ್ಯ ಬಳಸುವ ವಸ್ತುಗಳಾದ ಆಹಾರ ಸಾಮಗ್ರಿಗಳು,ಬಟ್ಟೆಗಳು,ಅಡುಗೆಮನೆ ಸಾಮಗ್ರಿಗಳು, ತರಕಾರಿ, ಹಣ್ಣು,ಬ್ಯೂಟಿ ಸಾಮಗ್ರಿಗಳು ಇನ್ನು ಅನೇಕ  ಪ್ರತಿನಿತ್ಯಬೇಕಾಗುವ ವಸ್ತುಗಳು ಇಲ್ಲಿ ಕೈಗೆಟಕುವ ದರದಲ್ಲಿ ಸಿಗುತ್ತವೆ.
  ರಾಧಾಕೃಷ್ಣನ್ ದಮಾನಿ ಇದರ ಸಂಸ್ಥಾಪಕರು.ಇವರು ಮೂಲತಃ ರಾಜಸ್ತಾನದ ಬೀಕನೆರ್ ಎಂಬ ಊರಿಗೆ ಸೇರಿದವರು. Avenue Supermarts Ltd.(ASL) ಮೂಲಕ D-Mart ಅನ್ನು 2002 ರಲ್ಲಿ ಪ್ರಾರಂಭಿಸಿದರು.ಮುಂಬೈನ ಪೋವೈನಲ್ಲಿ ಇದರ ಮೊದಲ ಬ್ರಾಂಚ್ ಆರಂಭವಾಯಿತು.ಅಲ್ಲದೇ ಪೋವೈ, ಮುಂಬೈಯಲ್ಲೆ ಇದರ ಪ್ರಧಾನ ಕಚೇರಿ ಇದೆ.
ಕರ್ನಾಟಕ,ಮಹಾರಾಷ್ಟ್ರ,ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮದ್ಯಪ್ರದೇಶ,ರಾಜಸ್ತಾನ್, ಉತ್ತರಪ್ರದೇಶ,ಪಂಜಾಬ್,ಚಂಡಿಗಡ್,ಗುಜರಾತ್ ಹೀಗೆ ದೇಶಾದ್ಯಂತ 11 ರಾಜ್ಯಗಳ 72 ನಗರಗಳಲ್ಲಿ ಒಟ್ಟು 206 ಬ್ರಾಂಚ್ ಗಳನ್ನು ಹೊಂದಿ ತನ್ನ ಕಾರ್ಯನಿರ್ವಹಿಸುತ್ತಾ ಜನರ ದಿನನಿತ್ಯದ ಬದುಕಿಗೆ ಆಸರೆಯಾಗಿದೆ.
  D-Mart, D-Mart Minimax, D-Mart Premia, D-Homes, Dutch Harbor ಹೀಗೆ ಹಲವು ಕಂಪನಿಗಳನ್ನು ಪ್ರಾರಂಭಿಸುವ ಮೂಲಕ Avenue Supermarts Ltd.(ASL)ನ ರಾಧಾಕೃಷ್ಣನ್ ದಮಾನಿ ಅವರು ತಮ್ಮ ವ್ಯಾಪಾರ-ವಹಿವಾಟುಗಳನ್ನ ವೃದ್ಧಿಸಿಕೊಂಡಿದ್ದಾರಲ್ಲದೆ,ವಿಸ್ತರಿಸಿ ಕೊಂಡಿದ್ದಾರೆ.ಅದಲ್ಲದೆ ರಾಧಾಕೃಷ್ಣನ್ ದಮಾನಿಯವರು ಫೋರ್ಬ್ಸ್ ಟಾಪ್ 10 Billionaire ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
  ಇತ್ತೀಚಿನ ದಿನಗಳಲ್ಲಿ COVID-19 ಮಹಾಮಾರಿ ಜಗತ್ತಿನಾದ್ಯಂತ ತನ್ನ ಪ್ರಭಾವ ಬೀರುತ್ತಾ ಅನೇಕ ಜನರ ಜೀವನವನ್ನ ಕೊನೆಯಾಗಿಸಿದೆ. ಭಾರತದಲ್ಲೂ ದಿನೇ ದಿನೇ ಹೆಚ್ಚುತ್ತಿದೆ. ಹೀಗಿರುವಾಗ ಭಾರತ ಸರ್ಕಾರ ದೇಶವನ್ನು ಲಾಕ್ ಡೌನ್ ಮಾಡುವ ಮೂಲಕ ಎಲ್ಲ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದೆ.ಆದರೆ D-Mart ಎಂದಿನಂತೆ ತನ್ನ ಕಾರ್ಯ ನಿರ್ವಹಿಸುತ್ತಿದೆ.ಜನರಿಗೆ ಬೇಕಾಗುವ ದಿನನಿತ್ಯದ ಸಾಮಗ್ರಿಗಳನ್ನು ಆನ್ಲೈನ್ ಮೂಲಕ ಗ್ರಾಹಕರ ಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತಿದೆ.ಹೀಗೆ ತನ್ನ ಗಲ್ಲಾಪೆಟ್ಟಿಗೆಯನ್ನು ಭರ್ತಿ ಮಾಡಿಕೊಳ್ಳುತ್ತಿದೆ.
 ಅದಲ್ಲದೇ PM Care's Fund ಗೆ 100 ಕೋಟಿ ಹಾಗೂ ಮಹಾರಾಷ್ಟ್ರ,ಗುಜರಾತ್ ಸರ್ಕಾರಕ್ಕೆ ತಲಾ 10 ಕೋಟಿ, ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ, ಪಂಜಾಬ್, ರಾಜಸ್ತಾನ ರಾಜ್ಯ ಸರ್ಕಾರಗಳಿಗೆ ತಲಾ 5 ಕೋಟಿ ರೂ, ತಮಿಳುನಾಡು, ಛತ್ತೀಸ್ ಗಢ,ಮದ್ಯಪ್ರದೇಶ, ಉತ್ತರಪ್ರದೇಶ ರಾಜ್ಯ ಸರ್ಕಾರಗಳಿಗೆ ತಲಾ 2.5 ಕೋಟಿ ರೂಪಾಯಿ ಧನ-ಸಹಾಯವನ್ನು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. COVID-19 ವಿರುದ್ಧ ಹೋರಾಡಲು ದೇಶಕ್ಕೆ,ಪ್ರಧಾನಿಗಳಿಗೆ ಹಾಗೂ ಸರ್ಕಾರಕ್ಕೆ ಶಕ್ತಿ ತುಂಬಿದ್ದಾರೆ.
ಅವರಿಗೆ ಮತ್ತು ಅವರು ಸಾಕಿ ಬೆಳೆಸುತ್ತಿರುವ ಕಂಪೆನಿಗೆ ಒಳಿತಾಗಲಿ.
ಜೈ ಹಿಂದ್ 🇮🇳

ಇಂತಿ ನಿಮ್ಮವ ✍️
🔹ಅಭಿಷೇಕ್. ಜೆ. ಎಂ 🔹

Twitter:- @abhish_jm

Instagram:- @abhish_jm


  






Tuesday, April 7, 2020

"ಸಾಮಾಜಿಕ ಜಾಲತಾಣ"


  ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವು ತನ್ನದೇಯಾದ ಪ್ರಾಮುಖ್ಯತೆ ಪಡೆದುಕೊಂಡಿದೆ. ಚಿಕ್ಕವರಿಂದ ಹಿಡಿದು ವಯಸ್ಸಾದವರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. 
ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಮ್, ಸ್ನಾಪ್ ಚಾಟ್, ಟ್ವಿಟ್ಟರ್, ಟೆಲಿಗ್ರಾಂ,ಯೂಟ್ಯೂಬ್,ಹೀಗೆ ಹತ್ತು ಹಲವು ಸಾಮಾಜಿಕ ಜಾಲತಾಣಗಳು ದಿನೇ ದಿನೇ ತನ್ನ ಬಳಕೆದಾರರನ್ನು ಹೆಚ್ಚಿಸಿಕೊಳ್ಳುತ್ತಲೆ ಇದೆ.
  ಜಗತ್ತಿನಲ್ಲಿ ೨ನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಭಾರತ.ಆದ್ದರಿಂದ ಇಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆಯು ಹೆಚ್ಚಿದೆ.ಪ್ರತಿ ಮನೆಗೆ ಒಬ್ಬರಂತೆ ಹಿಡಿದರು ದೇಶದಲ್ಲಿರುವ ಮನೆಗಳ ಸಂಖ್ಯೆಯ ಲೆಕ್ಕ ಸಿಕ್ಕರೆ ನಿಮಗೆ ದೇಶದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಅಂದಾಜು ಸಿಗಬಹುದು. 
  ಸಾಮಾನ್ಯ ನಾಗರಿಕರು ಸಹ ಇದರತ್ತವಾಲಿದ್ದಾರೆ. ದಿನಪತ್ರಿಕೆ ಓದುವುದು, ವಾರ್ತೆ ಕೇಳುವುದು, ಅಲ್ಲದೆ ಹೆಂಗಸರು ಅವರಿಗಿಷ್ಟವಾದ ಧಾರಾವಾಹಿ, ಸಿನೆಮಾ ನೋಡುವುದು ಹೀಗೆ ಹತ್ತು ಹಲವು ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.ಇನ್ನು ರಾಜಕೀಯ ಪಕ್ಷಗಳ ನಾಯಕರು ಸಹ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದಾರೆ. ಅವರ ರಾಜಕೀಯ ಪ್ರಚಾರ ಇದರ ಮೂಲಕವು ನಡೆಯುತ್ತಿದೆ.ಎಷ್ಟೋ ಸಮಸ್ಯೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಗೆಹರಿದಿವೆ. ಅಲ್ಲದೇ ರಾಜಕೀಯ ನಾಯಕರ ಪರ-ವಿರೋಧದ ಅಲೆ,ಲೈಕ್,ಕಮೆಂಟ್ ಗಳ ಸುರಿಮಳೆ.ಹೀಗೆ ಸಾಮಾಜಿಕ ಜಾಲತಾಣ ತನ್ನ ಪ್ರಭಾವವನ್ನು ಎಲ್ಲೆಡೇ ಬೀರಿದೆ.
  ಇನ್ನು ಇಂದಿನ ಯುವಪೀಳಿಗೆ ಬಗ್ಗೆ ಹೇಳಬೇಕೆಂದರೆ  ಭಾರತ ದೇಶ ಪ್ರಪಂಚದಲ್ಲಿ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶವಾಗಿದೆ.ಅವರು ಸಹ ಸಾಮಾಜಿಕ ಜಾಲತಾಣಗಳೇ ಜೀವನ ಎನ್ನುವ ಹಾಗೆ ಬದುಕುತ್ತಿದ್ದಾರೆ. ಎಷ್ಟೋ ಯುವಕರು ಇದರ ಮೂಲಕ ಜೀವನ ರೂಪಿಸಿಕೊಂಡಿದ್ದಾರೆ ಅಲ್ಲದೇ ಜೀವನವನ್ನು ಹಾಳು ಮಾಡಿಕೊಂಡಿದ್ದು ಇದೆ. ಸಾಮಾಜಿಕ ಜಾಲತಾಣವನ್ನು ಬಳಸುವ ಬಹುಪಾಲು ಯುವಕರು ಕೋಪ ಮತ್ತು ಭಯದಿಂದ ನರಳುತ್ತಿದ್ದಾರೆ ಎಂದು ಸಂಶೋಧನಾ ವರದಿಯೊಂದು ಹೊರಬಿದ್ದಿದೆ. ಇತ್ತೀಚಿನ ದಿನಗಳಲ್ಲಿ ಬರಿ ಸುಳ್ಳು ಸುದ್ದಿಗಳು, ಸುಳ್ಳು ಆರೋಪಗಳೂ ಸಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.ಆದ್ದರಿಂದ ಯುವಕರು ಸತ್ಯದ ಬಗ್ಗೆ ಒತ್ತುಕೊಟ್ಟು ಒಳ್ಳೆಯ ರೀತಿಯಲ್ಲಿ ಸಾಮಾಜಿಕ ಜಾಲತಾಣವನ್ನು ಬಳಸಬೇಕಾಗಿದೆ.
  ಸಾಮಾಜಿಕ ಜಾಲತಾಣವಂತು ಮಾಹಿತಿ, ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಬಹು ದೊಡ್ಡ ವೇದಿಕೆಯಾಗಿ ಪರಿವರ್ತನೆಯಾಗಿದೆ. ಎರೆ-ಮರೆಯಲ್ಲಿದ್ದ ಸಾವಿರಾರು ಪ್ರತಿಭೆಗಳು ಇದರಿಂದ ಅನಾವರಣಗೊಂಡಿವೆ. ವ್ಯಾಪಾರ-ವ್ಯವಹಾರ ವೃದ್ಧಿಗೆ, ಮಾರಲು, ಕೊಂಡುಕೊಳ್ಳಲು, ಪ್ರಚಾರ ಮಾಡಲು ಉತ್ತಮ ವೇದಿಕೆಯಾಗಿದೆ. ಎಷ್ಟೋ ಯುವಕರು ಇದರ ಮೂಲಕ ಜೀವನ ರೂಪಿಸಿಕೊಂಡಿದ್ದಾರೆ.
  ಇತ್ತೀಚೆಗೆ  COVID-19 ಜಗತ್ತಿನಾದ್ಯಂತ ತನ್ನ ಹೆಜ್ಜೆ ಇಟ್ಟಾಗಿನಿಂದ, ದೇಶವೇ ಲಾಕ್ ಡೌನ್ ಆದ ಕಾರಣ ಸಾಮಾಜಿಕ ಜಾಲತಾಣ ಬಳಸುವವರ ಸಂಖ್ಯೆ ವೃದ್ಧಿಸಿದೆ.
ಸಂಗೀತ, ಚಲನಚಿತ್ರ, ವಿಜ್ಞಾನ-ತಂತ್ರಜ್ಞಾನ, ಸಾಹಸ ಹೀಗೆ ಮನೋರಂಜನಾ ಕಾರ್ಯಕ್ರಮಗಳು ಇಲ್ಲಿ ದೊರೆಯುತ್ತಿರುವುದರಿಂದ  ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
"ಇಂದಿನ ಯುವಕರೇ ಮುಂದಿನ ಪ್ರಜೆಗಳು" ಆದ ಕಾರಣ ಜಾಲತಾಣಗಳಲ್ಲಿ ಅತಿ ಹೆಚ್ಚು ಸಕ್ರಿಯರಾಗಿರುವ ಯುವಕರು ಸರಿಯಾದ ರೀತಿಯಲ್ಲಿ ಇದನ್ನು ಬಳಸಬೇಕಾಗಿದೆ. ಜಾಲತಾಣಗಳ ಮೂಲಕ ದೇಶ ವಿರೋಧಿ ಹೇಳಿಕೆ ಕೊಡುವುದು,ದೇಶಕ್ಕೆ ಮಾರಕವಾಗುವಂತಹ ಕೃತ್ಯ ಎಸಗುವುದನ್ನು ನಿಲ್ಲಿಸಿ ಒಳ್ಳೆಯ ರೀತಿಯಲ್ಲಿ ದೇಶಕ್ಕೆ ಹಾಗೂ ತಮಗೆ ಒಳಿತಾಗುವಂತಹ ಕೆಲಸ ಇದರ ಮೂಲಕ ಮಾಡಬೇಕಾಗಿದೆ.ತಮ್ಮಲಿರುವ ಪ್ರತಿಭೆ ಅನಾವರಣ ಮಾಡಿಕೊಳ್ಳಲು ಒಳ್ಳೆಯ ವೇದಿಕೆಯಾಗಿ ರೂಪಗೊಂಡಿದೆ.
   ಆದ್ದರಿಂದ ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ರೀತಿ ಬಳಸಿಕೊಂಡು ದೇಶ ಕಟ್ಟುವ ಕೆಲಸ ಮಾಡಬೇಕಾಗಿದೆ.ಆಗ ಮಾತ್ರ "ದೇಶ ನಮಗೇನು ಕೊಟ್ಟಿದೆ ಅನ್ನುವುದಕ್ಕಿಂತ ನಾವೇನು ದೇಶಕ್ಕೆ ಕೊಟ್ಟಿದ್ದೇವೆ" ಎಂಬ ಮಾತಿಗೆ ಉತ್ತರ ದೊರಕುತ್ತದೆ. ಇದರ ಮೂಲಕ ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ರೀತಿ ಬಳಸಿಕೊಂಡು ದೇಶವನ್ನು ಕಟ್ಟುವ ಕೆಲಸ ಮಾಡೋಣ..
ಜೈ ಹಿಂದ್ 🇮🇳

ಇಂತಿ ನಿಮ್ಮವ ✍️
🔹ಅಭಿಷೇಕ. ಜೆ. ಎಂ🔹

Twitter- @abhish_jm
Instagram- @abhish_jm



Sunday, April 5, 2020

"ನಾ ಕಂಡಂತೆ ನಮೋ"

"ನರೇಂದ್ರ ದಾಮೋದರದಾಸ್ ಮೋದಿ" ಹೆಸರಲ್ಲೇ ಒಂದು ಶಕ್ತಿ ಇದೆ. ಈ ಹೆಸರು ಕೇಳಿದರೆ ಮೈ ರೋಮಾಂಚನವಾಗುತ್ತದೆ. ಜಗತ್ತು ಕಂಡ ಅತ್ಯಂತ ಶ್ರೇಷ್ಠ, ಯಶಸ್ವಿ ಪ್ರಧಾನಮಂತ್ರಿ ಆಗಿ ನಮೋ ಹೊರಹೊಮ್ಮಿದ್ದಾರೆ. ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಅತ್ಯಂತ ದೀರ್ಘಕಾಲದವರೆಗೆ ಆಳಿದ ಹೆಗ್ಗಳಿಕೆ ಇವರದ್ದು.
ಸದಾ ಅಭಿವೃದ್ಧಿಯ ಕಡೆ ಚಿಂತಿಸುವ ವ್ಯಕ್ತಿತ್ವ. ೬೦ ವರ್ಷಗಳ ಕಾಂಗ್ರೆಸ್ ಆಡಳಿತದ ನಂತರ ಮೋದಿಜೀ ನಾಯಕತ್ವದಲ್ಲಿ ಬಿಜೆಪಿ ದೇಶದ ಚುಕ್ಕಾಣಿ ಹಿಡಿಯಿತು. "ಸಬ್ ಕಾ ಸಾಥ್ ಸಬ್ ಕಾ ವಿಕಾಸ್" ಎಂಬ ಧ್ಯೇಯ ವಾಕ್ಯದೊಂದಿಗೆ ಅಭಿವೃದ್ಧಿ ಮಂತ್ರ ಜಪಿಸುತ್ತಾ ಆಡಳಿತ ನಡೆಸಿ ಹಲವು ದಿಟ್ಟ ನಿರ್ಧಾರದೊಂದಿದೆ ದೇಶದ ಜನ- ಮನ ಗೆದ್ದಿದ್ದಾರೆ.
      ಹಿಂದಿನ ಯುಪಿಎ ಸರ್ಕಾರ ಮಾಡಿದ ಸಾಲವನ್ನತಿರಿಸಿ, ಅಕ್ಕ-ಪಕ್ಕ ದೇಶಗಳ ಜೊತೆ ಉತ್ತಮ ಸಂಬಂಧ ಬೆಸೆದು ಭಾರತವನ್ನು "ವಿಶ್ವಗುರು"ವಾಗಿಸುವತ್ತ ಶ್ರಮಿಸುತ್ತಿದ್ದಾರೆ. ಎರಡನೇ ಅವಧಿಗೆ ತಮ್ಮ ಸರ್ಕಾರವನ್ನು ಮುನ್ನಡೆಸುತ್ತಾ ಹಲವಾರು ಪ್ರಮುಖ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಪೂರ್ಣಗೊಳಿಸುತ್ತಿದ್ದಾರೆ. ನೆನೆಗುದಿಗೆ ಬಿದ್ದಿದ್ದ ಹಲವಾರು ಕಾರ್ಯಗಳು ಪೂರ್ಣಗೊಳ್ಳುತ್ತಿವೆ.ಅಮೆರಿಕ,ಇಸ್ರೇಲ್, ರಷ್ಯಾ, ಭೂತಾನ್,ನೇಪಾಳ್, ಹೀಗೆ ಹತ್ತು ಹಲವು ದೇಶದ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಮೋದಿ ಅವರ ಆಡಳಿತ ವೈಖರಿಯನ್ನು  ಶ್ಲಾಘಿಸುತ್ತಿದ್ದಾರೆ.
    ಇದೆಲ್ಲದರ ನಡುವೆ COVID-19 ಎಂಬ ಮಹಾಮಾರಿ ಇಡೀ ಜಗತ್ತನ್ನೇ ಆಕ್ರಮಿಸಿಕೊಂಡಿದೆ. ಜಗತ್ತಿನಲ್ಲೇ ಅತ್ಯಂತ ಸುಸಜ್ಜಿತ ವೈದ್ಯಕೀಯ ವ್ಯವಸ್ಥೆ ಹೊಂದಿರುವ ಅಮೆರಿಕ, ಇಟಲಿಹಂತಹ ರಾಷ್ಟ್ರಗಳು ಕೊರೋನ ರೋಗಕ್ಕೆ ತುತ್ತಾಗಿ ನಿವಾರಿಸಲಾಗದೆ ಕೈ ಕಟ್ಟಿ ಕುಳಿತಿವೆ. ಇಂತ ಹೊತ್ತಲ್ಲೇ ಭಾರತದ ಪ್ರಧಾನಿ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡು ದೇಶವನ್ನೇ ಲಾಕ್ ಡೌನ್ ಮಾಡಿ ಕೋರೋನ  ತಡೆಗಟ್ಟುವಲ್ಲಿ ಯಶಸ್ವಿ ಆಗುತ್ತಿದ್ದಾರೆ. ನನ್ನ ಪ್ರಕಾರ ಇಡೀ ದೇಶ ಮೊಟ್ಟ ಮೊದಲ ಬಾರಿಗೆ ಜನತಾ ಕರ್ಫ್ಯೂಗೆ ಅಭೂತ ಪೂರ್ವ ಬೆಂಬಲ ಸೂಚಿಸಿದೆ. ಪ್ರಧಾನಿಮಂತ್ರಿಯ ಒಂದು ಕರೆ ಇಡೀ ದೇಶ ಒಳಿತಿಗಾಗಿ ಎಂಬುದು ಎಲ್ಲರಿಗೂ ಮನದಟ್ಟಾಗಿದೆ ಹಾಗೂ ಇದರಿಂದ ವೈದ್ಯರು, ಪೊಲೀಸರು, ನರ್ಸ್ ಗಳು, ಪೌರಕಾರ್ಮಿಕರಿಗೆ ದೇಶವೇ ಎದ್ದು ನಿಂತು ಚಪ್ಪಾಳೆ, ಗಂಟೆ ಬಾರಿಸಿ ಗೌರವ ಸೂಚಿಸಿದೆ.
   ಇದಲ್ಲದೆ ಅಮೆರಿಕಾ, ಆಸ್ಟ್ರೇಲಿಯ, ಇಸ್ರೇಲ್ ಸೇರಿ ಹಲವು ರಾಷ್ಟ್ರಗಳು COVID-19 ಟಾಸ್ಕ್ ಫೋರ್ಸ್ ನ ನೇತೃತ್ವ ವಹಿಸುವಂತೆ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತಿದ್ದಾರೆ. ಇದೊಂದೇ ಉದಾಹರಣೆ ಸಾಕು ಮೋದಿಯವರ ನಾಯಕತ್ವ ಗುಣ ಮತ್ತು ಅವರು ಭಾರತವನ್ನು ವಿಶ್ವಗುರುವಾಗಿಸುವತ್ತ ಶ್ರಮಿಸುತ್ತಿರುವುದು ಗೊತ್ತಾಗಿ ಬಿಡುತ್ತದೆ. ಮೋದಿ ಅವರ ಬಗ್ಗೆ ಬರೆಯುತ್ತಾ ಹೋದರೆ ಪುಟಗಳೇ ಸಾಲದು ಹಾಗೆಯೇ ಅವರ ವ್ಯಕ್ತಿತ್ವ ಮತ್ತು ಅವರ ವರ್ಚಸ್ಸು... 
ಇಲ್ಲಿಗೆ ನನ್ನ ಬರವಣಿಗೆಯನ್ನು ಮುಗಿಸುತ್ತ,ಮೋದಿಯವರಿಗೆ ಆ ಭಗವಂತ ಆರೋಗ್ಯ, ಆಯಸ್ಸು,ಶಕ್ತಿಯನ್ನು ಕೊಡಲಿ ಎಂದು ಆಶಿಸುತ್ತೇನೆ. ಹಾಗೆಯೇ ನನ್ನ ದೇಶ COVID-19 ಇಂದ ಬೇಗ ಗುಣಮುಖವಾಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
 ಓದಿದ ಎಲ್ಲರಿಗೂ ನನ್ನ ಧನ್ಯವಾದಗಳು..
ಜೈ ಹಿಂದ್ 🇮🇳

ಇಂತಿ ನಿಮ್ಮವ ✍️
ಅಭಿಷೇಕ್. ಜೆ. ಎಂ

Twitter:- @abhish_jm
Instagram:- @abhish_jm

ಜೊತೆಗಿರದ ಜೀವ ಎಂದಿಗೂ ಜೀವಂತ !

   ನಮ್ಮ ಪ್ರೀತಿಯ ಪುನೀತ್ ರಾಜಕುಮಾರ್ ನಮ್ಮನ್ನ ಅಗಲಿದ್ದಾರೆ.ತುಂಬಾ ದಿನಗಳಿಂದ ಅವರ ಬಗ್ಗೆ ಬರೆಯಬೇಕು ಅಂತ ಅನ್ನಿಸ್ತಿತ್ತು. ಅಷ್ಟೊಂದು ವಿಸ್ತಾರವಾಗಿ ಅಲ...